ಮಂಗಳೂರು: ವೈಕುಂಠ ಏಕಾದಶಿ ದಿನವಾದ ಇಂದು ಕರಾವಳಿಯ ದೇವಸ್ಥಾನಗಳಲ್ಲಿ ವಿಶೇಶ ಉತ್ಸವಗಳು ಗಮನಸೆಳೆದಿವೆ. ಕೃಷ್ಣನ ನಾಡು ಉಡುಪಿಯ ಮಠಕ್ಕೆ ಭಕ್ತಸಾಗರವೇ ಹರಿದುಬಂದಿದೆ.
ಇದೇ ವೇಳೆ, ಪ್ರತೀ ಹಬ್ಬಗಳಂದು ವಿಶೇಷ ಉತ್ಸವಗಳಿಗೆ ಸಾಕ್ಷಿಯಾಗುತ್ತಿರುವ, ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ ಸಹಿತ ಕರಾವಳಿಯ ದೇಗುಲಗಳಲ್ಲಿ ವಿಶೇಷ ಪೂಜೆಗಳಲ್ಲಿ ಆಸ್ತಿಕರು ಭಾಗವಹಿಸಿ ಪುನೀತರಾದರು.
ಈ ನಡುವೆ ಕಟೀಲು ಶ್ರೀ ದೇವಳದಲ್ಲಿ ಶ್ರೀ ದೇವಿಗೆ ಧನುರ್ಮಾಸದ ಬೆಳಿಗ್ಗಿನ ಮಹಾಪೂಜೆ ನೆರವೇರಿತು. ಭಾರೀ ಸಂಖ್ಯೆಯಲ್ಲಿ ಭಕ್ತರು ಈ ಪೂಜಾ ಕ್ಷಣಕ್ಕೆ ಸಾಕ್ಷಿಯಾದರು.
https://youtu.be/rZpCWCLR3fM