ಬೆಂಗಳೂರು,: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಚಾಲಕ ಕಂ ನಿರ್ವಾಹಕ ಹುದ್ದೆಯ ನೇಮಕಾತಿ ಸಂಬಂಧ ಸಂಭವನೀಯ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.
ಜಾಹೀರಾತು ಸಂಖ್ಯೆ 1/2020 ದಿನಾಂಕ 14.02.2020ರನ್ವಯ KSRTCಗೆ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಬೆಂಗಳೂರಿನ ಶಾಂತಿನಗರದಲ್ಲಿರುವ KSRTC ಕೇಂದ್ರ ಕಚೇರಿಯಲ್ಲಿ ಹಾಗೂ ನಿಗಮದ ವೆಬ್ ಸೈಟ್ ನಲ್ಲಿ ಸಂಭವನೀಯ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಈ ಸಂಭವನೀಯ ಆಯ್ಕೆಪಟ್ಟಿ ಬಗ್ಗೆ ಆಕ್ಷೇಪಣೆ ಇದ್ದಲ್ಲಿ 11.06.2025ರ ಸಂಜೆ 5.30ರೊಳಗಾಗಿ ಕರಾರಸಾ ನಿಗಮದ ಕೇಂದ್ರ ಕಚೇರಿಯಲ್ಲಿರುವ ನೇಮಕಾತಿ ಶಾಖೆಗೆ ಖುದ್ದಾಗಿ ಅಥವಾ ನಿಗಮದ ಅಧಿಕೃತ ಇ-ಮೇಲ್ dycpmrct@ksrtc.org ಮುಖಾಂತರ ಸಲ್ಲಿಸಬಹುದು.ಜೂನ್ 11ರ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ನಿಗಮದ ನಿರ್ದೇಶಕರು (ಸಿ&ಜಾ) ತಿಳಿಸಿದ್ದಾರೆ. ಈ ನೇಮಕಾತಿಯು ಪಾರದರ್ಶಕವಾಗಿದ್ದು ಯಾವುದೇ ಆಮಿಷ/ ಅವ್ಯವಹಾರದಲ್ಲಿ ಅಭ್ಯರ್ಥಿಗಳು ತೊಡಗಬಾರದೆಂದು ಅವರು ಸಲಹೆ ನೀಡಿದ್ದಾರೆ.