ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ‘ಪಾಯಿಂಟ್ ಟು ಪಾಯಿಂಟ್’ ಮತ್ತು ವೇಗದೂತ ಕಾರ್ಯಾಚರಣೆಗೆ ಹೊಸ ವ್ಯವಸ್ಥೆ ರೂಪಿಸಿದೆ. ಈ ಸೇವೆಗಾಗಿ ನಿಯೋಜಿಸಲಾಗುವ ನೂತನ ಕರ್ನಾಟಕ ಸಾರಿಗೆ ವಾಹನ ‘ಪ್ರೋಟೋ ಟೈಪ್ ವಾಹನ’ ವಿನ್ಯಾಸ ಗಮನಸೆಳೆದಿದೆ. ಈ ವಿನ್ಯಾಸವನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಪರಿಶೀಲಿಸಿದರು. ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಬಸ್ಸುಗಳನ್ನು ಪರಿಶೀಲಿಸಿದ ಸಚಿವರು ಮಾಹಿತಿ ಪಡೆದರು.
ಈ ನೂತನ ವ್ಯವಸ್ಥೆಯ ಹೈಲೈಟ್ಸ್ ಹೀಗಿದೆ:
ನೂತನವಾಗಿ ಕಾರ್ಯಾಚರಣೆಗೆ ನಿಯೋಜಿಸಲಾಗುವ ಕರ್ನಾಟಕ ಸಾರಿಗೆ ವಾಹನವನ್ನು ಮೆ. ಕೆ.ಎಂ.ಎಸ್. ಕೋಚ್ ಬಿಲ್ಡರ್ಸ್ರವರು ನಿರ್ಮಾಣ ಮಾಡಿದ್ದಾರೆ. ಈ ಬಸ್ಸುಗಳು ಹಲವಾರು ವಿಶಿಷ್ಟತೆಗಳನ್ನು ಹೊಂದಿವೆ.
ವಾಹನದ ಎತ್ತರ 3420 ಮಿ.ಮಿ.
ಆಸನಗಳ ಸಂಖ್ಯೆ 52
ಪ್ರಯಾಣಿಕರ ಆಸನ ಬಕೆಟ್ ಟೈಪ್
ವಾಹನದ ಮುಂದಿನ/ ಹಿಂದಿನ ಗಾಜು ವಿಶಾಲವಾಗಿರುತ್ತದೆ.
ಪ್ರಯಾಣಿಕರ ಕಿಟಕಿ ಪ್ರೇಮ್ ಹಾಗೂ ಮೇಲಿನ ಗಾಜು ವಿಶಾಲವಾಗಿರುತ್ತದೆ
ಕಿಟಕಿ ಗಾಜು ದೊಡ್ಡದಾದ ಟಿಂಟೆಡ್ ಗಾಜುಗಳು
ವಾಹನದ ಒಳಾಂಗಣದ ಲಗೇಜ್ ಕ್ಯಾರಿಯರ್ ವಿನೂತನ ವಿನ್ಯಾಸ.
ಒಳಾಂಗಣದ ದೀಪ ಸತತವಾದ ಎಲ್.ಇ. ಡಿ ದೀಪ
ಹಿಂದಿನ/ಮುಂದಿನ ಮಾರ್ಗ ಎಲ್.ಇ.ಡಿ ಮಾರ್ಗ ಫಲಕ ಅಳವಡಿಕೆ
ಬ್ಯಾನೆಟ್ ಇನ್ಸುಲೇಶನ್ ಮತ್ತು ರೆಕ್ಸಿನ್ ಪ್ಯಾಡಿಂಗ್
ಪ್ರಯಾಣಿಕರ ಬಾಗಿಲು ಸ್ವಯಂಚಾಲಿತ ಸೆನ್ಸ್ರ್ರ್ ಮತ್ತು ತುರ್ತು ಬಟನ್ ವ್ಯವಸ್ಥೆ
ವಾಹನದ ಮುಂಭಾಗ ವಿನೂತನ ಆರ್ಕಷಕ ವಿನ್ಯಾಸ ದೊಡ್ಡ ಗ್ಲಾಸ್
ಲಗ್ಗೇಜ್ ಕ್ಯಾರಿಯರ್ ವಿಶಾಲವಾಗಿದ್ದು, ಒಳ ಭಾಗದಲ್ಲಿ ಹೆಚ್ಚು ಎತ್ತರವಾಗಿದ್ದು, ಹೆಚ್ಚಿನ ಸಾಮಗ್ರಿಗಳನ್ನು ಸಾಗಿಸಬಹುದಾಗಿದೆ.
ಎಲ್ಲಾ ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಿದೆ.
ಆಸನಗಳ ಮಧ್ಯೆ ( leg space ) ಸ್ಥಳಾವಕಾಶ ಹೆಚ್ಚಿದೆ.
ಪ್ರಸ್ತುತ ಇಂದು ಪರಿಶೀಲಿಸಲಾದ ಪ್ರೋಟೋ ಟೈಪ್ ವಾಹನವು ಪಾಯಿಂಟ್ ಟು ಪಾಯಿಂಟ್ ಮತ್ತು ವೇಗದೂತ ವಾಹನವನ್ನಾಗಿ ಉಪಯೋಗಿಸಲಿದ್ದು, ಮುಂಬರುವ ಎಲ್ಲಾ ಹೊಸ ಬಸ್ಸುಗಳು ಈ ರೀತಿಯ ವಿನ್ಯಾಸ ವನ್ನು ಹೊಂದಲಿದೆ.
ಈ ಪ್ರೋಟೋ ಟೈಪ್ ಮಾದರಿಯನ್ನು ಪರಿಶೀಲಿಸಿದ ಮಾನ್ಯ ಸಾರಿಗೆ ಮಾತ್ತು ಮುಜರಾಯಿ ಸಚಿವರು ಹಾಗೂ ಅಧ್ಯಕ್ಷರು,ಮಾತನಾಡಿ, ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ವಾಹನಗಳನ್ನು ಕಾರ್ಯಾಚರಣೆಗೊಳಿಸಿ, ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಎಲ್ಲಾ ಬದಲಾವಣೆಗಳನ್ನು ತರಲಾಗಿದೆ ಹಾಗೂ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಒಂದು ತಿಂಗಳ ಅವಧಿಯಲ್ಲಿ ಹೊಸ ಬಸ್ಸುಗಳು ಬರಲಿದ್ದು, ಎಲ್ಲಾ ಹೊಸ ವಾಹನಗಳು ಈ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾ ನಿರ್ದೇಶಕರಾದ ಜಿ.ಸತ್ಯವತಿ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಈ ನೂತನ ವ್ಯವಸ್ಥೆಯ ಹೈಲೈಟ್ಸ್ ಹೀಗಿದೆ: