ಲಂಡನ್​​ನ ಲ್ಯಾಂಬೆತ್​​ ಬಸವೇಶ್ವರ ಫೌಂಡೇಶನ್​​ ಸ್ಮಾರಕಕ್ಕೆ ದಶಮಾನೋತ್ಸವ ಸಡಗರ; ಮೋದಿ ಆಹ್ವಾನಕ್ಕೆ ತೀರ್ಮಾನ

ಲಂಡನ್​​: ಲಂಡನ್​​ನಲ್ಲಿರುವ ಲ್ಯಾಂಬೆತ್​​ ಬಸವೇಶ್ವರ ಫೌಂಡೇಶನ್​​ ಸ್ಮಾರಕ ದಶಮಾನೋತ್ಸವ ಸಂಭ್ರಮದಲ್ಲಿದೆ. ಈ ದಶಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ.

ಲಂಡಲ್‌ನ ಥೇಮ್ಸ್ ನದಿ ತೀರದಲ್ಲಿ2015ರಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಇದೀಗ ಹತ್ತನೇ ವರ್ಷದ ಸಮಾರಂಭದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನಿಸಲು ಲ್ಯಾಂಬೆತ್​​ ಬಸವೇಶ್ವರ ಫೌಂಡೇಶನ್​​ ಸ್ಮಾರಕ ಸಂಸ್ಥೆ ಚಿಂತನೆ ನಡೆಸಿದೆ.


ಈ ನಡುವೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ಲಂಡನ್ ಪ್ರವಾಸದ ಸಂದರ್ಭದಲ್ಲಿ ಲಂಡಲ್‌ನ ಥೇಮ್ಸ್ ನದಿ ತೀರದ ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ್ದಾರೆ. ಆ ವೇಳೆ ಬಸವರಾಜ್ ಬೊಮ್ಮಾಯಿ ಜೊತೆ ಚರ್ಚಿಸಿರುವ ಲಂಡನ್ ಮಾಜಿ ಮೇಯರ್ ನೀರಜ್ ಪಾಟೀಲ್ ಅವರು ದಶಮಾನೋತ್ಸವ ಸಮಾರಂಭಕ್ಕೆ ಮೋದಿಯವರನ್ನು ಆಹ್ವಾನಿಸುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ತಮ್ಮ ಲಂಡನ್ ಪ್ರವಾಸ ಬಗ್ಗೆ ಸಾಮಾಜಿಕ ಜಾಲತಾಣ ‘X’ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ ಬಸವರಾಜ್ ಬೊಮ್ಮಾಯಿ, ಲಂಡನ್ನಿನ ಥೇಮ್ಸ್ ನದಿಯ ದಂಡೆಯ ಮೇಲೆ ವಿರಾಜಮಾನವಾಗಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಯು.ಕೆ ಕನ್ನಡಿಗರ ಸಂಘದ ಪದಾಧಿಕಾರಿಗಳೊಂದಿಗೆ ಗೌರವ ಸಲ್ಲಿಸಿದೆ. ಕಾಯಕವೇ ಕೈಲಾಸ ಸೇರಿದಂತೆ ಭಕ್ತಿ ಭಂಡಾರಿ ಬಸವಣ್ಣನವರ ಆಶಯಗಳು ಅಂದು ಇಂದು ಹಾಗೂ ಎಂದೆಂದಿಗೂ ನಮಗೆ ದಾರಿದೀಪವಾಗಿವೆ ಎಂದು ಬರೆದುಕೊಂಡಿದ್ದಾರೆ.

Related posts