‘ಕಮಲ ಮುಕ್ತ ದಕ್ಷಿಣ ಭಾರತ’; ಫಲಿಸಿದ ‘ಇಂಡಿಯಾ’ ಮೈತ್ರಿಕೂಟದ ತಂತ್ರ

ಹೈದರಾಬಾದ್: ಪಂಚರಾಜ್ಯಗಳ ಚುನಾವಣಾ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಆಡಳಿತಾರೂಢ BRS ಪಕ್ಷದ ಜೊತೆ ತೀವ್ರ ಸೆಣಸಾಟ ನಡೆಸಿರುವ ಕಾಂಗ್ರೆಸ್ ಸರಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ‘ಕಮಲ ಮುಕ್ತ ದಕ್ಷಿಣ ಭಾರತ’ ಮಾಡುವ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ತಂತ್ರ ಫಲಿಸಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುವ ಮೂಲಕ ದಕ್ಷಿಣ ಭಾರತದಲ್ಲಿ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದೆ. ಕೆಲವು ತಿಂಗಳ ಹಿಂದಷ್ಟೇ ಕರ್ನಾಟಕದಲ್ಲಿ ಗೆದ್ದ ಕಾಂಗ್ರೆಸ್ ಇದೀಗ ತೆಲಂಗಾಣಕ್ಕೂ ತನ್ನ ಚಕ್ರಾಧಿಪತ್ಯವನ್ನು ವಿಸ್ತರಿಸಿದಂತಾಗಿದೆ. ಅಷ್ಟೇ ಅಲ್ಲ, ಗೋವಾವನ್ನು ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ‘I.A.N.D.I.A.’ ಮೈತ್ರಿಕೂಟ ಯಶಸ್ವಿಯಾಗಿದೆ.

119 ಸದಸ್ಯಬಲದ ತೆಲಂಗಾಣ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 60 ಸ್ಥಾನಗಳ ಅಗತ್ಯವಿದ್ದು, ಆಡಳಿತಾರೂಢ ತೆಲಂಗಾಣದ ಕನಸು ನುಚ್ಚು ನೂರಾಗಿದೆ. ಕಾಂಗ್ರೆಸ್ ಪಕ್ಷ ಸರಳ ಬಹುಮತದೊಂದಿಗೆ ಗದ್ದುಗೆ ಏರಿದೆ.

Related posts