‘ಮಹಾವತಾರ ನರಸಿಂಹ’: ಹಿರಣ್ಯಕಶ್ಯಪ–ಪ್ರಹ್ಲಾದರ ಪೌರಾಣಿಕ ಕಥೆಗೆ ಆಧುನಿಕ ಜೀವ

ವಿಷ್ಣುವಿನ ಚತುರ್ಥ ಅವತಾರವಾದ ನರಸಿಂಹನ ಕಥೆಯನ್ನು ಆಧರಿಸಿದ ಮಹತ್ವಾಕಾಂಕ್ಷೆಯ ಅನಿಮೇಟೆಡ್ ಚಲನಚಿತ್ರ ‘ಮಹಾವತಾರ ನರಸಿಂಹ’ದ ಟ್ರೇಲರ್ ಬಿಡುಗಡೆ ಆಗಿದ್ದು, ಹಿರಣ್ಯಕಶ್ಯಪ ಮತ್ತು ಪ್ರಹ್ಲಾದ ನಡುವಿನ ಪೌರಾಣಿಕ ಸಂಘರ್ಷವನ್ನು ಆಧುನಿಕ ತಂತ್ರಜ್ಞಾನದಿಂದ ಜೀವಂತವಾಗಿ ತೆರೆಯ ಮೇಲೆ ತರುವ ಪ್ರಯತ್ನ ನಡೆದಿದೆ.

ಚಿತ್ರದ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್ ಮತ್ತು ಕ್ಲೀಮ್ ಪ್ರೊಡಕ್ಷನ್ಸ್ ಈ ಪೌರಾಣಿಕ ಮಹಾಕಾವ್ಯವನ್ನು ಐದು ಭಾರತೀಯ ಭಾಷೆಗಳಲ್ಲಿ ಜುಲೈ 25, 2025ರಂದು ಬಿಡುಗಡೆ ಮಾಡುತ್ತಿದ್ದಾರೆ. 3D ರೂಪದಲ್ಲೂ ಚಿತ್ರ ಬಿಡುಗಡೆ ಆಗಲಿದೆ.

ಭಗವಾನ್ ವಿಷ್ಣುವಿನ ನಾಲ್ಕನೇ ಅವತಾರ ನರಸಿಂಹ ರೂಪದಲ್ಲಿನ ಈ ಚಿತ್ರದಲ್ಲಿ, ತನ್ನ ನಾಸ್ತಿಕ ತಂದೆ ಹಿರಣ್ಯಕಶಿಪುವಿನ ವಿರುದ್ಧ ಧರ್ಮದ ಮೌಲ್ಯಗಳಿಗೆ ನಿಲುಕುವ ಪ್ರಹ್ಲಾದನ ಕಥೆಯನ್ನು ಹೊಸ ತಳಹದಿಯಲ್ಲಿ ಚಿತ್ರಿಸಲಾಗಿದೆ. ನರಸಿಂಹನ ಅವತಾರದ ದೃಶ್ಯಗಳು ಟ್ರೇಲರ್‌ನಲ್ಲಿಯೇ ಕಣ್ಣು ಸೆಳೆಯುತ್ತವೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕ ವಿಜಯ್ ಕಿರಗಂದೂರ್ ‘ಈ ಮಹಾಕಾವ್ಯವನ್ನು ಅನಿಮೇಷನ್ ಮಾಧ್ಯಮದಲ್ಲಿ ಹೇಳಲು ಸಾಧ್ಯವಾಗಿದ್ದು ನಮಗೆ ಹೆಮ್ಮೆ. ಈ ಕಥೆಗಳು ಭಾರತವನ್ನು ವ್ಯಾಖ್ಯಾನಿಸುತ್ತವೆ. ಇವು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ’ ಎಂಡಿದ್ದಾರೆ.

ಚಿತ್ರದ ನಿರ್ದೇಶನವನ್ನು ಅಶ್ವಿನ್ ಕುಮಾರ್, ಕುಶಾಲ್ ದೇಸಾಯಿ ಹಾಗೂ ಚೈತನ್ಯ ದೇಸಾಯಿ ಕೈಗೊಂಡಿದ್ದಾರೆ. ಶಿಲ್ಪಾ ಧವನ್ ಅವರು ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಯೋಜನೆಯನ್ನು ಬೆಂಬಲಿಸಿದ್ದಾರೆ.

Related posts