ಮಲೆನಾಡಲ್ಲಿ ಮಳೆಹಾನಿ; ಸೇನಾನಿಯಂತೆ ಕಾರ್ಯಾಚರಣೆಗೆ ಧುಮುಕಿದ ಸಚಿವ ರವಿ

ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ ಮಲೆನಾಡಿನಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಹಲವೆಡೆ ರಸ್ತೆಗಳು ಕುಸಿದಿದ್ದು ವಾಹನ ಸಂಚಾರವೂ ಏರುಪೇರಾಗಿದೆ.


ಈ ಬಗ್ಗೆ ಮಾಹಿತಿ ಪಡೆದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಳೆ ಸಂತ್ರಸ್ಥ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಧಾವಿಸಿ ಪರಿಹಾರ ಕಾರ್ಯಾಚರಣೆಗೆ ಧುಮುಕಿದರು. ತಾವೇ ಸ್ಥಳದಲ್ಲಿ ನಿಂತು ಪರಿಹಾರ ಕಾರ್ಯದಲ್ಲಿ ತಲ್ಲೀನರಾದರು.
ಶನಿವಾರ ಚಾರ್ಮಾಡಿ ಘಾಟ್’ನಲ್ಲಿನ ಭೂ ಕುಸಿತ ಪ್ರದೇಶದಲ್ಲಿ ಬೀಡು ಬಿಟ್ಟು ರಸ್ತೆ ದುರಸ್ತಿ ಮಾಡಿಸಿದರು. ದಕ್ಷಿಣಕನ್ನಡ-ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆ ಇದಾಗಿದೆ.


ವ್ಯಾಪಕ ಮಳೆಯಿಂದಾಗಿ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದು, ಆ ಸ್ಥಳಗಳಿಗೆ ಸಚಿವ ಸಿ.ಟಿ.ರವಿ ಖುದ್ದು ಭೇಟಿ ನೀಡಿದರು.

ಸಂತ್ರಸ್ತ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆಯನ್ನು ವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ನೀಡಿದರು.

ಇದನ್ನೂ ಓದಿ.. ಯಗಚಿ ಜಲಾಶಯಕ್ಕೆ ಸಚಿವ ಸಿ.ಟಿ ರವಿ ಬಾಗಿನ 

ಮಲೆನಾಡಿನ ಅಯ್ಯನ ಕೆರೆಯಲ್ಲಿ ಸಾಹಸ ಕ್ರೀಡಾ ತರಬೇತಿ; ಸಚಿವ ಸಿ.ಟಿ.ರವಿ ಚಾಲನೆ

Related posts