ಮಂಗಳೂರು ವಿಮಾನ ನಿಲ್ಧಾಣದಲ್ಲಿ ‘ವೀರವನಿತೆ ಅಬ್ಬಕ್ಕ’ ಪ್ರತಿಮೆ: ತುಳುವರಿಂದ ಹೋರಾಟಕ್ಕೆ ಮುನ್ನುಡಿ

ಮಂಗಳೂರು: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರಿಂದ ‘ಪ್ರಗತಿಯ ಪ್ರತಿಮೆ’ ಅನಾವರಣವಾಗುತ್ತಿದ್ದಂತೆಯೇ ಕರಾವಳಿಯಲ್ಲೂ ಹಕ್ಕೊತ್ತಾಯದ ಘೋಷಣೆ ಮೊಳಗಿದೆ. ತುಳುನಾಡಿನ ವೀರವನಿತೆಯ ಪ್ರತಿಮೆ ಸ್ಥಾಪನೆಯಾಗಬೇಕು ಎಂಬ ಆಗ್ರಹ ಕೇಳಿಬಂದಿದೆ.

ಬೆಂಗಳೂರಿನಲ್ಲಿ ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ ಮಾಡಿದ ರೀತಿಯಲ್ಲೇ ಮಂಗಳೂರಿನ ವಿಮಾನ ನಿಲ್ದಾಣ ಬಳಿ ‘ವೀರವನಿತೆ ರಾಣಿ ಅಬ್ಬಕ್ಕ’ ಪ್ರತಿಮೆ ಅನಾವರಣಕ್ಕೆ ಒತ್ತಾಯ ಕೇಳಿಬಂದಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ತುಳುನಾಡಿನ ಮಂದಿ ಪೋಸ್ಟ್ ಹಾಕಿ ಅಭಿಯಾನ ಆರಂಭಿಸಿ ಸರ್ಕಾರದ ಗಮನಸೆಳೆದಿದ್ದಾರೆ.

ಕೆಲವು ದಿನಗಳಿಂದ ತುಳು ಭಾಷೆಯ ನಿರ್ಲಕ್ಷ್ಯದ ವಿರುದ್ದ ತುಳುನಾಡಿನ ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ತುಳು ಭಾಷೆಗೆ ಸೂಕ್ತ ಸ್ಥಾನಮಾನ ಸಿಗವೇಕೆಂಬುದು ತುಳುವರ ವಾದ. ಈ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸ್ಪಂಧಿಸುತ್ತಲ್ಲ ಎಂಬ ಆಕ್ರೋಶ ಎದ್ದಿದೆ. ಇದರ ಬೆನ್ನಲ್ಲೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ವೀರವನಿತೆ ಅಬ್ಬಕ್ಕ ರಾಣಿಯ ಪ್ರತಿಮೆ ಸ್ಥಾಪಿಸವೇಕೆಂಬ ಒತ್ತಾಯವನ್ನು ತುಳುನಾಡಿನ ಜನರು ಮುಂದಿಟ್ಟಿದ್ದಾರೆ.

ಬೆಂಗಳೂರು ಕಟ್ಟಲು ಕೆಂಪೇಗೌಡರು ಹೇಗೆ ಶ್ರಮಪಟ್ಟಿದ್ದಾರೋ ಅದೇ ರೀತಿ ಪರಕೀಯರ ದಾಳಿಯಿಂದ ಕರಾವಳಿಯನ್ನು ರಕ್ಷಿಸಲು ಉಳ್ಳಾಲದ ರಾಣಿ ಅಬ್ಬಕ್ಕ ಪ್ರಾಣ ಪಣಕ್ಕಿಟ್ಟಿದ್ದರು. ನಾಡಿಗಾಗಿ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಸೂಕ್ತ ಗೌರವ ಸಿಗಬೇಕಿದೆ ಎಂಬುದು ತುಳುನಾಡಿನ ಜನರ ಆಗ್ರಹವಾಗಿದೆ.

Related posts