ಮಂಗಳೂರು: ಮಂಗಳೂರು ವೈಭವದ ದಸರಾ ಮಹೋತ್ಸವಕ್ಕೆ ತೆರೆಬಿದ್ದಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 9 ದಿನ ನಡೆದ ಅದ್ದೂರಿ ನವರಾತ್ರಿ ಮಹೋತ್ಸವ ಮಂಗಳವಾರ ಸಂಜೆಯ ಅದ್ದೂರಿ ದಸರಾ ಮೆರವಣಿಗೆಯೊಂದಿಗೆ ಇತಿಹಾಸ ಬರೆಯಿತು.
ಕುದ್ರೋಳಿ ಕ್ಷೇತ್ರದಿಂದ ಆರಂಭವಾದ ಬೃಹತ್ ದಸರಾ ಮೆರವಣಿಗೆಯಲ್ಲಿ ವಿಘ್ನನಿವಾರಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯರ ಮೂರ್ತಿಗಳನ್ನು ಸ್ತಬ್ಧಚಿತ್ರ ಗಮನಸೆಳೆಯಿತು.
ದಸರಾ ಮಹೋತ್ಸವದ ರೂವಾರಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ನೆರವೇರಿದ ದಸರಾ ಮೆರವಣಿಗೆಯಲ್ಲಿ ಸುಮಾರು ಒಂದು ಸಾವಿರ ಆಕರ್ಷಕ ಕೇರಳ ಕೊಡೆಗಳು, ನೂರಕ್ಕೂ ಅಧಿಕ ಬ್ಯಾಂಡ್ ಸೆಟ್‍ಗಳು, ಸುಮಾರು 40 ಜಾನಪದ ಕುಣಿತಗಳ ತಂಡ, ಕೇರಳ ಚೆಂಡೆವಾದನ, ಕೊಂಬು ಕಹಳೆ ಹಾಗೂ ದೇಶದ 60 ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಭಾಗವಹಿಸಿದ್ದವು.
ವೈಭವದ ಮೆರವಣಿಗೆ ತಡರಾತ್ರಿಯೂ ಮುಂದುವರಿದು ಬುಧವಾರ ನಸುಕಿನ ಜಾವ ಉತ್ಸವ ಮೂರ್ತಿಗಳ ವಿಸರ್ಜನೆಯೊಂದಿಗೆ ಸಮಾಪನಗೊಂಡಿತು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಶಾರದೆಯ ವಿಸರ್ಜನೆಯ ದೃಶ್ಯಗಳು #ಮಂಗಳೂರುದಸರಾ pic.twitter.com/REexr4vNx2
— Ritam ಕನ್ನಡ (@RitamAppKannada) October 25, 2023