ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಸುಧೀರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಸುನಿತಾ ಚುನಾಯಿತರಾಗಿದ್ದಾರೆ.
ಈ ಅವಧಿಯ ನಾಲ್ಕನೇ ಮೇಯರ್-ಉಪಮೇಯರ್ ಚುನಾವಣೆಯು ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಿತು. 60 ಸ್ಥಾನಗಳ ಪೈಕಿ ಬಿಜೆಪಿಗೆ 44, ಕಾಂಗ್ರೆಸ್ ಗೆ 14, ಎಸ್ ಡಿಪಿಐ ಗೆ 2 ಸ್ಥಾನ ಪಡೆದುಕೊಂಡಿದೆ.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಉಪಮೇಯರ್ ಆಗಿ ಸುನೀತಾ ತಣ್ಣೀರುಬಾವಿ ಆಯ್ಕೆಯಾಗಿದ್ದು ನೂತನ ಮೇಯರ್ರನ್ನು ನಾಯಕರು ಅಭಿನಂದಿಸಿದ್ದಾರೆ.