ಸಂಘನಿಕೇತನ ಗಣೇಶೋತ್ಸವ.. ಕ್ರೈಸ್ತ ಸಮುದಾಯದ ಗಣ್ಯರಿಂದ ಕೈಂಕರ್ಯ

ಮಂಗಳೂರು: ಕಡಲತಡಿ ಮಂಗಳೂರಿನ ಸಂಘನಿಕೇತನದಲ್ಲಿ ಗಣೇಶೋತ್ಸವ ಸಂಭ್ರಮ ಗಮನಸೆಳೆದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಕ್ತಿ ಕೇಂದ್ರ ಸಂಘನಿಕೇತನಕ್ಕೆ ಭೇಟಿ ನೀಡಿದ ಕ್ರೈಸ್ತ ಸಮುದಾಯದ ಗಣ್ಯರು ಈ ಉತ್ಸವ ಸಂಭ್ರಮದಲ್ಲಿ ಭಾಗಿಯಾಗಿ ಕುತೂಹಲದ ಕೇಂದ್ರಬಿಂದುವಾಗಿದೆ.

ದಶಕಗಳ ಗಣೇಶೋತ್ಸವ ಆಚರಣೆಗೆ ಹೆಸರಾಗಿರುವ ಸಂಘನಿಕೇತನದಲ್ಲಿ ಭಾಗಿಯಾದ ಕ್ರೈಸ್ತ ಸಮುದಾಯದ ಗಣ್ಯರು, ವಿವಿಧ ಕೈಂಕರ್ಯ ನೆರವೇರಿಸಿದರು.

ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ನೇತೃತ್ವದಲ್ಲಿ ಕ್ರೈಸ್ತ ಸಮದಾಯದ ಗಣ್ಯರ ಭೇಟಿ ನೀಡಿದ್ದರು. ಈ ಗಣ್ಯರನ್ನು ಬರಮಾಡಿಕೊಂಡ ಆರೆಸ್ಸೆಸ್ ದಕ್ಷಿಣ ಪ್ರಾಂತ‌ ಸರಸಂಘ ಚಾಲಕ ಡಾ ವಾಮನ್‌ ಶಣೈ ಅವರು ಪೂಜಾ ಮಹೋತ್ಸವದ ಮಹತ್ವ ವಿವರಿಸಿದರು.

ಸಾಮರಸ್ಯ ಹಾಗೂ ಸೌಹಾರ್ದತೆಯ ಉದ್ದೇಶದಿಂದ ಗಣೇಶೋತ್ಸವದಲ್ಲಿ ಭಾಗಿಯಾದ ಕ್ರೈಸ್ತ ಸಮುದಾಯದ ಗಣ್ಯರು ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ 76 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಇದಾಗಿದೆ. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಿಲೀನೊ ನೇತೃತ್ವದಲ್ಲಿ ಕ್ರೈಸ್ತ ಮುಖಂಡರು ಈ ಮಹೋತ್ಸವದಲ್ಲಿ ಭಾಗಿಯಾದರು.

Related posts