ವಿಶಾಖಪಟ್ಟಣಂ ಕಡಲ ಕಿನಾರೆಯಲ್ಲಿ ಭೀಕರ ಅಗ್ನಿ ಅನಾಹುತ; 40ಕ್ಕೂ ಹೆಚ್ಚು ಬೋಟ್‌ಗಳು ಭಸ್ಮ

ವಿಶಾಖಪಟ್ಟಣಂ: ಆಂದ್ರಪ್ರದೇಶದ ವಿಶಾಖಪಟ್ಟಣಂ ಕಡಲ ಕಿನಾರೆಯಲ್ಲಿ ಮೀನುಗಾರಿಕಾ ಬೋಟ್‌ಗಳು ಲಂಗರು ಹಾಕಿದ್ದ ಪ್ರದೇಶದಲ್ಲಿ ಭೀಕರ ಅಗನಿ ಅನಾಹುತ ಸಂಭವಿಸಿದೆ.

ಭಾನುವಾರ ತಡರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 40ಕ್ಕೂ ಹೆಚ್ಚು ಬೋಟ್‌ಗಳು ಬೆಂಕಿಗೆ ಆಹುತಿಯಾಗಿದೆ. ರಾತ್ರಿ ಇದ್ದಕ್ಕಿದ್ದಂತೆಯೇ ಕಾಣಿಸಿಕೊಂಡ ಬೆಂಕಿ ಏಕಾಏಕಿ ಹಬ್ಬಿದೆ. ಸ್ವಲ್ಪ ಹೊತ್ತಿನಲ್ಲೇ ಅಪಾರ ಸಂಖ್ಯೆಯ ಬೋಟುಗಳು ಧಗಧಗಿಸಿ ಹೊತ್ತಿ ಉರಿದಿದೆ.

ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರ ತಂಡಗಳು ರಾತ್ರಿ ವೇಳೆ ಬೋಟ್‌ಗಳಲ್ಲಿ ತಂಗುವುದು ಸಾಮಾನ್ಯ. ಅದೇ ರೀತಿ ಕಳೆದ ರಾತ್ರಿಯೂ ಮೀನುಗಾರರು ದೋಣಿಗಳಲ್ಲಿ ವಿರಮಿಸಿರಬಹುದೆಂಬ ಸಂಶಯ ಕಾಡಿದೆ.

Related posts