ಹಾವೇರಿ: ಕೊರೋನಾ ಹಾವಳಿ ತಡೆ ಸಂಬಂಧ ಲಾಕ್ಡೌನ್ ಜಾರಿಯಲ್ಲಿದ್ದು, ಇದರಿಂದಾಗಿ ಲಕ್ಷಾಂತರ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ಭಾಗದ ವಿವಿಧ ಸಂಘನೆಗಳ ಮೂಲಕ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಅವಶ್ಯಕ ದಿನಸಿ ವಸ್ತುಗಳನ್ನು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ವಿತರಿಸಿದರು.
ಕ್ಷೌರಿಕರು, ಆಟೋಚಾಲಕರು, ಅಶಾ ಕಾರ್ತಕರ್ತೆಯರು, ಅಗಸರು, ಸಿಂಪಿಗರು, ಕಮ್ಮಾರ, ಬಡಿಗೇರ, ಕೊರಗ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ.ನೀರುಗಂಟಿ, ಅರ್ಚಕ, ಮೇದಾರ, ಮಾಲ್ವಿ ಸೇರಿದಂತೆ ಸುಮಾರು 5000 ಕಾರ್ಮಿಕರಿಗೆ ದಿನಸಿ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿಸಚಿವರು,
ಕೊರೊನಾ ಲಾಕ್ಡೌನ್ ಸಂಕಷ್ಟದ ಸಮಯದಲ್ಲಿ ಕೆಲವು ಸಮುದಾಯಗಳು ಕೆಲಸ ನಿರ್ವಹಿಸಲಾಗದೇ ತೊಂದರೆಗೊಳಗಾಗಿದ್ದವು. ಅವರ ನೆರವಿಗೆ ಧಾವಿಸುವ ಸಂಬಂಧ ಸರ್ಕಾರ 1610 ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿದೆ ಎಂದರು.
ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ಸರ್ಕಾರ ದಿಟ್ಟಕ್ರಮ ವಹಿಸಿದೆ. ಮುಂದಿನ ದಿನಗಳಲ್ಲಿ ಇನ್ನು ಕೆಲವು ವರ್ಗಗಳಿಗೆ ಪರಿಹಾರ ಘೋಷಿಸಲಿದೆ. ರಾಜ್ಯ ಸರ್ಕಾರ ಎಲ್ಲಾ ವರ್ಗದವರ ಪರವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ರಾಜ್ಯದ ಹಿತವನ್ನು ಕಾಪಾಡಲು ಬದ್ಧವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.