ಚಿಂಚೋಳಿ: ಸೇಡಂ ಕ್ಷೇತ್ರದ ಪೆಂಚೆನಪಳ್ಳಿ ಗ್ರಾಮದಲ್ಲಿ ಹೊಸ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ, ಗ್ರಾಮ ಸಹೋದರಿಯರು, ಅಂಗನವಾಡಿ ಶಿಕ್ಷಕಿಯರು ಮತ್ತು ಮಕ್ಕಳು ರಾಕಿ ಕಟ್ಟಿ ಸಿಹಿ ತಿನ್ನಿಸಿ ಆತ್ಮೀಯ ಸ್ವಾಗತ ಕೋರಿದರು.
ರಕ್ಷಾಬಂಧನ ಹಬ್ಬದ ಸಂಭ್ರಮದಲ್ಲಿ ಗ್ರಾಮಸ್ಥರು ಪ್ರೀತಿಯ ಸಂಕೇತವಾಗಿ ಸಚಿವರಿಗೆ ರಾಖಿಯನ್ನು ಕಟ್ಟಿದರು. ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಂಡರು.