ಬಂಟ್ವಾಳ: ಬಂಟ್ವಾಳ ಕ್ಷೇತ್ರದ ಮತದಾರರು ನೀಡಿದ ಪ್ರತಿಯೊಂದು ಮತಕ್ಕೂ ನ್ಯಾಯ ಸಿಗುವ ಕೆಲಸವನ್ನು ಅತ್ಯಂತ ಪ್ರಾಮಾಣಿಕ ಪ್ರಯತ್ನದ ಮೂಲಕ ಮಾಡಿದ್ದೇನೆ ಎಂಬ ಆತ್ಮ ತೃಪ್ತಿ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಬಂಟ್ವಾಳ ಮಂಡಲದ ವತಿಯಿಂದ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ರೈತ ಮೋರ್ಚಾದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಯಲ್ಲಿ ಅಭೂತಪೂರ್ವ ಬೆಂಬಲ ಪ್ರೀತಿ ಸಿಕ್ಕಿದೆ ಅದು ನನಗೆ ಸಿಕ್ಕಿದ ದೊಡ್ಡ ಆಸ್ತಿ ಎಂದು ಸಂತಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರು ಸರ್ಕಾರ ರಚನೆ ಮಾಡಿದ ಫಲವಾಗಿ ಬಂಟ್ವಾಳ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಅಧಿಕವಾಗಿ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಯಿತು ಎಂದು ಅವರಿಗೆ ಅಭಿನಂದನೆ ಸಲ್ಲಿಸಿದರು. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಒಂದು ಲಕ್ಷ ಕೋಟಿ ರೂ ಅನುದಾನವನ್ನು ನರೇಗದ ಮೂಲಕ ಕೃಷಿಕರಿಗೆ ನೀಡಿದ ಪರಿಣಾಮವಾಗಿ ಕೋವಿಡ್ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಸ್ಥಿರವಾಯಿತು ಎಂಬುದನ್ನು ಉಲ್ಲೇಖ ಮಾಡಿದರು.
ಬಂಟ್ವಾಳದಲ್ಲಿ 24496 ಕೃಷಿಕರಿಗೆ ರೈತ ಕಿಸಾನ್ ಸನ್ಮಾನ್ ಯೋಜನೆ, 21 ಕೋಟಿ ರೂ. ಫಸಲ್ ಬಿಮಾ ಯೋಜನೆ ಯ ಮೂಲ ಕ ಸಿಕ್ಕಿದೆ. 13 ಕೋಟಿ ವೆಚ್ಚದಲ್ಲಿ ಜಕ್ರಿಬೆಟ್ಟು ಎಂಬಲ್ಲಿ ಕಿಂಡಿಅಣೆಕಟ್ಟು ಸಹಿತ ಸೇತುವೆ ನಿರ್ಮಾಣವಾಗಲಿದ್ದು, ಇದು ಈ ಭಾಗದ ರೈತರಿಗೆ ಅತ್ಯಂತ ಹೆಚ್ಚು ಪ್ರಯೋಜನವಾಗಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದರೆ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ರಾಜ್ಯ ನೀರು ಸರಬರಾಜು, ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್ ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಮ್ ದಾಸ ಬಂಟ್ವಾಳ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೀರ್ , ರೈತ ಮೋರ್ಚಾದ ಪ್ರಭಾರಿ ಕೇಶವ ಭಟ್ ಮುಳಿಯ, ಮೋರ್ಚಾಗಳ ಜಿಲ್ಲಾ ಸಂಯೋಕ ಈಶ್ವರ ಕಟೀಲು , ಜಿಲ್ಲಾ ಮಾದ್ಯಮ ಪ್ರಮುಖ್ ಸಂದೇಶ್ ಶೆಟ್ಟಿ, ರೈತ ಮೋರ್ಚಾದ ಬಂಟ್ವಾಳ ಮಂಡಲದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಮೂಡಬಿದರೆ ರೈತ ಮೋರ್ಚಾದ ಅಧ್ಯಕ್ಷ ಸೋಮನಾಥ, ಬೆಳ್ತಂಗಡಿ ರೈತ ಮೋರ್ಚಾದ ಅಧ್ಯಕ್ಷ ಜಯಂತ ಗೌಡ, ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಅಣ್ಣಳಿಕೆ, ರಾಘವೇಂದ್ರ ಭಟ್, ಮಂಡಲದ ಚುನಾವಣಾ ಪ್ರಭಾರಿ ರವಿ ಶಂಕರ್ ಮಿಜಾರು, ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮೊದಲಾದ ಪ್ರಮುಖರು ಸಮಾವೇಶದಲ್ಲಿ ಭಾಗಿಯಾಗಿದ್ದರು.