ಪ್ರಧಾನಿ ನರೇಂದ್ರ ಮೋದಿಗೆ ಗ್ರೀಸ್ ದೇಶದ ಎರಡನೇ ಅತ್ಯುನ್ನತ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್’ ಪ್ರಶಸ್ತಿ

ಅಥೆನ್ಸ್: ಪ್ರಧಾನಿ ನರೇಂದ್ರ ಮೋದಿಯವರಿಗೆ ಗ್ರೀಸ್ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭಿಸಿದೆ. ಗ್ರೀಸ್ ಅಧ್ಯಕ್ಷೆ ಕಟರೀನಾ ಸಕೆಲ್ಲರೊಪೌಲೌ ಅವರು ಅಥೆನ್ಸ್‌ನಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್’ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

ಈ ಕುರಿತಂತೆ ಟ್ವೀಟ್ ಮಾಡಿರುವ ನರೇಂದ್ರ ಮೋದಿ ತಮಗೆ ಈ ಪ್ರಶಸ್ತಿ ನೀಡಿ ಗೌರವಿಸಿರುವ ಗ್ರೀಸ್‌ ದೇಶಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ. ಅಧ್ಯಕ್ಷೆ ಕಟರೀನಾ ಅವರಿಗೆ ಧನ್ಯವಾದ ತಿಳಿಸಿರುವ ನರೇಂದ್ರ ಮೋದಿ, ಈ ಪ್ರಶಸ್ತಿಯು ಭಾರತದ ಬಗೆಗೆ ಗ್ರೀಸ್ ಜನತೆಗೆ ಇರುವ ಗೌರವವನ್ನು ತೋರಿಸುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Uncategorized

Related posts