ಮುಂಬೈ ಜೈ ಭವಾನಿ ಕಟ್ಟಡ ಅಗ್ನಿದುರಂತ: ಸತ್ತವರ ಸಂಖ್ಯೆ 6ಕ್ಕೆ ಏರಿಕೆ

ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.

ಮುಂಬೈನ ಗೋರೆಗಾಂವ್ ಪಶ್ಚಿಮ ಪ್ರದೇಶದ ಜೈ ಭವಾನಿ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಇಡೀ ಕಟ್ಟಡ ಬೆಂಕಿಗೆ ಆಹುತಿಯಾಯಿತು. ಕಟ್ಟಡದಲ್ಲಿದ್ದವರು ಹೊರಗೆ ಬರಲಾಗದೆ ಭೀಕರ ಮಾರಣಹೋಮವೇ ನಡೆದು ಹೋಗಿದೆ.

ಗೋರೆಗಾಂವ್ ವೆಸ್ಟ್‌ನ ಆಜಾದ್ ನಗರ ಪ್ರದೇಶದ ನೆಲಮಹಡಿ ಸೇರಿದಂತೆ 6 ಮಹಡಿಗಳನ್ನು ಹೊಂದಿರುವ ಜೈ ಭವಾನಿ ಕಟ್ಟಡದಲ್ಲಿ ಬೆಳಗಿನ ಜಾವ 3 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸುದೀರ್ಘ ಹೊತ್ತು ಕಾರ್ಯಾಚರಣೆ ಕೈಗೊಂಡು ಹಲವರನ್ನು ರಕ್ಷಿಸಿದೆ. ಈ ಬೆಂಕಿ ಅನಾಹುತದಲ್ಲಿ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Related posts