ಬರಿಗಾಲಲ್ಲಿ ‘ಮೈಸೂರ್ ಚಲೋ’; BJP-JDS ಪಾದಯಾತ್ರೆಯಲ್ಲಿ ಗಮನಸೆಳೆದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ

ಮೈಸೂರು: ಸದಾ ಒಂದಿಲ್ಲೊಂದು ನಡೆಯಿಂದ ಸಾರ್ವಜನಿಕರ ಗಮನಕೇಂದ್ರೀಕರಿಸುತ್ತಿರುವ ಬೈಂದೂರು ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ಈ ಬಾರಿಯ ಮೈಸೂರು ಚಲೋ ಪಾದಯಾತ್ರೆಯಲ್ಲಿ ಕೂಡಾ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.

ಸರಳತೆಗೆ ಹೆಸರಾಗಿರುವ ಉಡುಪಿ ಜಿಲ್ಲೆಯ ಈ ಶಾಸಕ ಪಕ್ಷದ ನಾಯಕರು-ಸೇನಾನಿಗಳ ಜೊತೆ ಶಾಸಕ ಗುರುರಾಜ್ ಗಂಟಿಹೊಳೆ ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಪಾದಯಾತ್ರೆಯುದ್ದಕ್ಕೂ ಬರಿಗಾಲಲ್ಲೇ ತೆರಳಿದ್ದು ವಿಶೇಷ.

ಮೂಡ ಹಗರಣ ಮತ್ತು ವಾಲ್ಮೀಕಿ ಹಗರಣ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮೈಸೂರ್ ಚಲೋ ಪಾದಯಾತ್ರೆ ನಡೆಯಿತು. ರಾಜ್ಯ ಬಿಜೆಪಿ ನಾಯಕರೆಲ್ಲರೂ ಭಾಗಿಯಾಗಿ ಪಾದಯಾತ್ರೆ ಯಶಸ್ವಿಗೊಳಿಸಿದರು.8 ದಿನಗಳ ಪಾದಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆಗೆ ಇಡೀ ರಾಜ್ಯದ ಗಮನ ಸೆಳೆದಿದ್ದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ.

ಎಂದಿನಂತೆ ಬರಿಗಾಲಲ್ಲಿ ಸಂಚರಿಸುವ ಬೈಂದೂರು ಶಾಸಕರು ಮೈಸೂರ್ ಚಲೋ ಪಾದಯಾತ್ರೆಯಲ್ಲೂ ಕೂಡ ಚಪ್ಪಲಿ ಧರಿಸದೆಯೇ ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ದರು.

ಮೂಲತಃ RSS ಪ್ರಚಾರಕರಾಗಿ ಸೇವೆ ಸಲ್ಲಿಸಿದ ಗುರುರಾಜ್ ಗಂಟಿಹೊಳೆಯವರು ಸಿಂಪಲ್ ಶಾಸಕ ಎಂದೇ ಗುರುತಾದವರು. ಮೈಸೂರು ಪಾದಯಾತ್ರೆಯಲ್ಲೂ ಇವರ ನಡೆ ಬಿಜೆಪಿ ಕಾರ್ಯಕರ್ತರ ನಡುವೆ ಗಮನಸೆಳೆಯಿತು.

Related posts