‘ನಮ್ಮ ಕ್ಲಿನಿಕ್’ ಎಂಬ ಆರೋಗ್ಯ ಸಂಜೀವಿನಿ

ಬೆಂಗಳೂರು: ನಗರವಾಸಿ ಬಡ ಜನರ ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸುವ ನಮ್ಮ ಕ್ಲಿನಿಕ್‌ಗಳು  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯನಿರ್ವಹಿಸಲಿವೆ.

ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್‌’ಗಳನ್ನು ಆರಂಭಿಸಲು ಸರ್ಕಾರ ಯೋಜನೆ ರೂಪಿಸಿದ್ದು,ಆರಂಭದಲ್ಲಿ 114 ಕ್ಲಿನಿಕ್‌ಗಳು ಲೋಕಾರ್ಪಣೆ. ಜನವರಿ ಅಂತ್ಯಕ್ಕೆ ಎಲ್ಲವೂ ಕಾರ್ಯನಿರ್ವಹಿಸಲಿವೆ.

10 ರಿಂದ 20 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‌‌ಗಳು ಸ್ಥಾಪನೆಯಾಗಲಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್‌ಗಳನ್ನು ಸರ್ಕಾರ ತೆರೆಯುತ್ತಿದೆ

ಬರೋಬ್ಬರಿ 12 ರೀತಿಯ ಆರೋಗ್ಯ ಸೇವೆ..

  • ನಮ್ಮ ಕ್ಲಿನಿಕ್‌’ಗಳಲ್ಲಿ 12 ರೀತಿಯ ಆರೋಗ್ಯ ಸೇವೆಗಳು ಲಭ್ಯ ಇರಲಿದೆ.

  • ತಲಾ ಒಬ್ಬ ವೈದ್ಯಾಧಿಕಾರಿ, ನರ್ಸಿಂಗ್‌ ಸ್ಟಾಫ್‌, ಲ್ಯಾಬ್‌ ಟೆಕ್ನಿಷಿಯನ್‌, ಡಿ ದರ್ಜೆ ನೌಕರರು ಇಲ್ಲಿ ಇರಲಿದ್ದಾರೆ.

  • ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆಗಳು,

  • ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ.

  • ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ , ಸಕ್ಕರೆ ಕಾಯಿಲೆ,

  • ದೀರ್ಘಾವಧಿ ಕಾಯಿಲೆಗಳು,

  • ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌, ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು,

  • ಕಣ್ಣಿನ ತಪಾಸಣೆ, ಮೆಂಟಲ್‌ ಹೆಲ್ತ್‌ಗೆ ಸಂಬಂಧಿಸಿದ ಮೂಲಭೂತ ಸೇವೆಗಳು 

  • ಇತರ ಆಸ್ಪತ್ರೆಗಳಿಗೆ ರೆಫರಲ್‌ ಸೇವೆಗಳು ಇಲ್ಲಿ ಲಭ್ಯ.

  • ವೃದ್ಧಾಪ್ಯ ಆರೈಕೆ, ತುರ್ತು ವೈದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಔಷಧಗಳು ಸಂಪೂರ್ಣ ಉಚಿತವಾಗಿರಲಿದೆ.

  • 14 ಪ್ರಯೋಗಶಾಲಾ ಪರೀಕ್ಷೆಗಳು ಲಭ್ಯ.

  • ಟೆಲಿ ಕನ್ಸಲ್ಟೇಷನ್‌ ಸರ್ವೀಸಸ್‌, ಕ್ಷೇಮ ಚಟುವಟಿಕೆಗಳು ಉಚಿತವಾಗಿವೆ.

ಎಲ್ಲೆಲ್ಲಿ ಎಷ್ಟು ಕ್ಲಿನಿಕ್‌ಗಳು?

  • ಬೆಂಗಳೂರು (ಬಿಬಿಎಂಪಿ ವ್ಯಾಪ್ತಿ) 243
  • ಬಾಗಲಕೋಟೆ 18
  • ಬಳ್ಳಾರಿ 11
  • ವಿಜಯನಗರ 6
  • ಬೆಳಗಾವಿ 21
  • ಬೆಂಗಳೂರು ಗ್ರಾಮಾಂತರ 9
  • ಬೀದರ್‌ 6
  • ಚಾಮರಾಜನಗರ 3
  • ಚಿಕ್ಕಬಳ್ಳಾಪುರ 3
  • ಚಿಕ್ಕಮಗಳೂರು 4
  • ಚಿತ್ರದುರ್ಗ 1
  • ದಕ್ಷಿಣ ಕನ್ನಡ 12
  • ದಾವಣಗೆರೆ 1
  • ಧಾರವಾಡ 6
  • ಗದಗ 11
  • ಹಾಸನ 5
  • ಹಾವೇರಿ 5
  • ಕಲಬುರ್ಗಿ 11
  • ಕೊಡಗು 1
  • ಕೋಲಾರ 3
  • ಕೊಪ್ಪಳ 3
  • ಮಂಡ್ಯ 4
  • ಮೈಸೂರು 6
  • ರಾಯಚೂರು 8
  • ರಾಮನಗರ 3
  • ತುಮಕೂರು 10
  • ಉಡುಪಿ 10
  • ಉತ್ತರ ಕನ್ನಡ 10
  • ವಿಜಯಪುರ 10
  • ಯಾದಗಿರಿ 3

Related posts