ಬೆಂಗಳೂರು: ಧಾರ್ಮಿಕ ಸಮಾನತೆಯ ಸಂತ ಶ್ರೀ ನಾರಾಯಣಗುರುಗಳ ಹೆಸರಲ್ಲಿ ಸಹಾಕಾರ ಸಂಘವೊಂದು ಅಸ್ತಿತ್ವಕ್ಕೆ ಬಂದಿದೆ. ಸಾಮಾಜಿಕ ಕಾರ್ಯಕರ್ತರೂ ಆಗಿರುವ ದೇಶದ ಆಹಾರೋದ್ದಿಮೆ ಕ್ಷೇತ್ರದ ದಿಗ್ಗಜ ಗೋವಿಂದ ಬಾಬು ಪೂಜಾರಿ ಅವರ ಮುನಾದಾಳುತ್ವದಲ್ಲಿ ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿ ರೂಪುಗೊಂಡಿದ್ದು ಈ ಹಣಕಾಸು ಸಂಸ್ಥೆ ಗುರುವಾರ ಉದ್ಘಾಟನೆಯಾಗಿದೆ.
ಸಮಾನತೆಯ ಹರಿಕಾರ, ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶ್ರೀ ನಾರಾಯಣ ಗುರು ಅವರ ಸವಿಸ್ಮರಣೆ ಮೂಲಕ ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿ ಅಸ್ತಿತ್ವಕ್ಕೆ ಬಂದಿದ್ದು, ಉದ್ಯಮ ಅಪೇಕ್ಷಿತರಿಗೆ ಆರ್ಥಿಕ ಶಕ್ತಿ ತುಂಬುವ ಮಹಾದುದ್ದೇಶದಿಂದ, ದೇಶದ ಪ್ರತಿಷ್ಠಿತ ಆಹಾರೋದ್ಯಮ ಸಂಸ್ಥೆ ChefTalkನ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿಯವರು ಈ ನೂತನ ಸೊಸೈಟಿಯನ್ನು ಕಟ್ಟಿದ್ದಾರೆ.
ಬೆಂಗಳೂರು ವಿಜಯನಗರದ ವೇಣುಗೋಪಾಲ್ ಆರ್ಕೆಡ್ (1ನೇ ಮುಖ್ಯರಸ್ತೆ,1ನೇ ಅಡ್ಡರಸ್ತೆ ಕ್ಲಬ್ ರೋಡ್) ನಲ್ಲಿರುವ ಸೊಸೈಟಿಯ ಆಡಳಿತ ಕಚೇರಿಯಲ್ಲಿ, ಕೇರಳ ಶಿವಗಿರಿಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ, ಅರೇಮಲ್ಲಾಪುರ ಶ್ರೀ ಶರಣ ಬಸವೇಶ್ವರ ಮಹಾಸಂಸ್ಥಾನದ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಈ ಸೊಸೈಟಿ ಹಣಕಾಸು ಚಟುವಟಿಕೆಗಳನ್ನು ಆರಂಭ ಮಾಡಿದೆ.