ಅಹಮದಾಬಾದ್: ಗುಜರಾತ್ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಜಾಮ್‌ನಗರದಲ್ಲಿರುವ ವಂತಾರದಲ್ಲಿ ವನ್ಯಜೀವಿ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು.
Inaugurated Vantara, a unique wildlife conservation, rescue and rehabilitation initiative, which provides a safe haven for animals while promoting ecological sustainability and wildlife welfare. I commend Anant Ambani and his entire team for this very compassionate effort. pic.twitter.com/NeNjy5LnkO
— Narendra Modi (@narendramodi) March 4, 2025
ಜಗತ್ತಿನ ವಿವಿಧೆಡೆ ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ರಕ್ಷಿಸಿ ಸಲಹುವ ಪ್ರಾಣಿ ಸಂಗ್ರಹಾಲಯ ಇದಾಗಿದೆ. 2,000ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳು ವಂತಾರದ ವನ್ಯಜೀವಿ ಕೇಂದ್ರದಲ್ಲಿವೆ. ಈ ಪೈಕಿ 1.5 ಲಕ್ಷಕ್ಕೂ ಹೆಚ್ಚು ಪ್ರಾಣಿಗಳು ರಕ್ಷಿಸಲ್ಪಟ್ಟವುಗಳಾಗಿವೆ.
ಈ ವನ್ಯಜೀವಿ ಕೇಂದ್ರವನ್ನು ಉದ್ಘಾಟಿಸಿದ ನರೇಂದ್ರ ಮೋದಿ, ಪ್ರಾಣಿಗಳೊಂದಿಗೆ ಸಂತಸದ ಕ್ಷಣಗಳನ್ನು ಕಳೆದರು. ಏಷ್ಯನ್ ಸಿಂಹದ ಮರಿಗಳು ಮತ್ತು ಬಿಳಿ ಸಿಂಹದ ಮರಿಗಳನ್ನು ಹಿಡಿದು, ಮುದ್ದಾಡಿ ಸಂತಸಪಟ್ಟರು. ಹುಲಿ ಹಾಗೂ ಸಿಂಹದ ಮರಿಗೆ ಬಾಟಲಿಯಲ್ಲಿ ಮೋದಿ ಹಾಲು ಕುಡಿಸಿ ಗಮನಸೆಳೆದರು.