ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಇಂದು ಹೊಸದಾಗಿ 453 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಬೆಂಗಳೂರಿನಲ್ಲಿ ಬರೋಬ್ಬರಿ 196 ಹೊಸದಾಗಿ ಪಾಸಿಟಿವ್ ಕೇಸ್ ವರದಿಯಾಗಿದ್ದು ರಾಜಧಾನಿ ಜನ ಆತಂಕಕ್ಕೀಡಾಗಿದ್ದಾರೆ.
- ಬೆಂಗಳೂರು ನಗರ : 196 ಹೊಸ ಕೇಸ್
- ಬಳ್ಳಾರಿ : 40 ಹೊಸ ಕೇಸ್
- ಕಲಬುರಗಿ : 39 ಹೊಸ ಕೇಸ್
- ವಿಜಯಪುರ : 39 ಹೊಸ ಕೇಸ್
- ಮೈಸೂರು : 18 ಹೊಸ ಕೇಸ್
- ಗದಗ್ : 18 ಹೊಸ ಕೇಸ್
- ಧಾರವಾಡ : 15 ಹೊಸ ಕೇಸ್
- ಬಾಗಲಕೋಟೆ : 14 ಹೊಸ ಕೇಸ್
- ಬೀದರ್ : 13 ಹೊಸ ಕೇಸ್
- ದಾವಣಗೆರೆ : 8 ಹೊಸ ಕೇಸ್
- ಉತ್ತರಕನ್ನಡ : 8 ಹೊಸ ಕೇಸ್
- ಕೋಲಾರ: 8 ಹೊಸ ಕೇಸ್
- ದಕ್ಷಿಣಕನ್ನಡ : 7 ಹೊಸ ಕೇಸ್
- ಮಂಡ್ಯ : 5 ಹೊಸ ಕೇಸ್
- ಹಾಸನ: 5 ಹೊಸ ಕೇಸ್
- ತುಮಕೂರು : 4 ಹೊಸ ಕೇಸ್
- ಯಾದಗಿರಿ : 3 ಹೊಸ ಕೇಸ್
- ಚಿಕ್ಕಬಳ್ಳಾಪುರ : 3 ಹೊಸ ಕೇಸ್
- ಹಾವೇರಿ : 3 ಹೊಸ ಕೇಸ್
- ರಾಯಚೂರು : 2 ಹೊಸ ಕೇಸ್
- ಶಿವಮೊಗ್ಗ : 2 ಹೊಸ ಕೇಸ್
- ರಾಮನಗರ : 2 ಹೊಸ ಕೇಸ್
- ಚಿಕ್ಕಮಗಳೂರು : 1 ಹೊಸ ಕೇಸ್
ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9150ಕ್ಕೆ ಏರಿಕೆಯಾಗಿದೆ. ಈ ಪೈಕಿ 5618 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ಸೋಂಕಿನಿಂದಾಗಿ ಐವರು ಮೃತಪಟ್ಟಿದ್ದು ಮೃತರ ಸಂಖ್ಯೆ 177 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೊರಡಿಸಿರುವ ಹೆಲ್ತ್ ಬುಲೆಟಿನ್ ಹೇಳಿದೆ.