ಯಾರಿಗೆ ಯಾವ ಖಾತೆ; ನೂತನ ಸಚಿವರಲ್ಲೂ ಕುತೂಹಲ

ಬೆಂಗಳೂರು: ಯಡಿಯೂರಪ್ಪ ಸಂಪುಟಕ್ಕೆ 7 ಮಂದಿ ಸೇರ್ಪಡೆಯಾಗಿದ್ದು ಇದೀಗ ರಾರಿಗೆ ಯಾವ ಖಾತೆ ಎಂಬ ಲೆಕ್ಕಾಚಾರ ಸಾಗಿದೆ. ಆದರೆ ತಕ್ಷಣಕ್ಕೆ ಈ ನೂತನ ಸಚಿವರಿಗೆ ಖಾತೆಗಳನ್ನು ಯಡಿಯೂರಪ್ಪ ಅವರು ಹಂಚಿಕೆ ಮಾಡಿಲ್ಲ. ಈ ನಡುವೆ ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ

ಸಚಿವರಿಗೆ ಹಂಚಿಕೆ ಮಾಡಲಾದ ಕೊಠಡಿಗಳ ಸಂಖ್ಯೆ ಹೀಗಿದೆ:

  • ಎಸ್ ಅಂಗಾರ: ವಿಧಾನಸೌಧ – ಕೊಠಡಿ ಸಂಖ್ಯೆ 252, 253ಎ
  • ಅರವಿಂದ್ ಲಿಂಬಾವಳಿ: ವಿಧಾನಸೌಧ – ಕೊಠಡಿ ಸಂಖ್ಯೆ 344,344ಎ
  • ಸಿ.ಪಿ. ಯೋಗೇಶ್ವರ್: ವಿಧಾನಸೌಧ – ಕೊಠಡಿ ಸಂಖ್ಯೆ 336, 336ಎ
  • ಮುರುಗೇಶ್ ನಿರಾಣಿ: ವಿಧಾನಸೌಧ – ಕೊಠಡಿ ಸಂಖ್ಯೆ 307, 307ಎ
  • ಆರ್ ಶಂಕರ್: ವಿಧಾನಸೌಧ – ಕೊಠಡಿ ಸಂಖ್ಯೆ 305, 305ಎ
  • ಎಂಟಿಬಿ ನಾಗರಾಜ್: ವಿಧಾನಸೌಧ – ಕೊಠಡಿ ಸಂಖ್ಯೆ 330, 330ಎ

ಇನ್ನೊಂದೆಡೆ ಖಾತೆಗಳನ್ನು ಪಡೆಯಲೂ ನೂತನ ಸಚಿವರು ಲಾಭಿ ನಡೆಸುತ್ತಿದ್ದಾರೆನ್ನಲಾಗಿದೆ. ಬೆಂಗಳೂರು ನಗರಾಭಿವೃದ್ಧಿ, ಇಂಧನ, ಅಬಕಾರಿ ಖಾತೆಗಳ ಮೇಲೆ ಹಲವಾರು ಕಣ್ಣಿಟ್ಟಿದ್ದಾರೆ. ಈ ಅಪಿಕಿ ಬೆಂಗಳೂರು ಅಭಿವೃದ್ಧಿ ಇಲಾಖೆ ಅರವಿಂದ ಲಿಂಬಾವಲಿಗೆ ಸಿಗುವ ಸಾಧ್ಯತೆಗಳಿದ್ದು, ಮುರುಗೇಶ್ ನಿರಾಣಿಯವರಿಗೆ ಇಂಧನ ಖಾತೆ ಹಂಚಿಕೆಯಾಗುವ ಸಂಭವವಿದೆ ಎನ್ನಲಾಗುತ್ತಿದೆ.

ಸಂಭವನೀಯ ಖಾತೆಗಳ ವಿವರ ಹೀಗಿದೆ.

  • ಎಸ್ ಅಂಗಾರ: ಕನ್ನಡ ಮತ್ತು ಸಂಸ್ಕೃತಿ
  • ಅರವಿಂದ್ ಲಿಂಬಾವಳಿ: ಬೆಂಗಳೂರು ಅಭಿವೃದ್ಧಿ
  • ಸಿ.ಪಿ. ಯೋಗೇಶ್ವರ್: ಯುವಜನ ಮತ್ತು ಕ್ರೀಡೆ
  • ಮುರುಗೇಶ್ ನಿರಾಣಿ: ಇಂಧನ
  • ಉಮೇಶ್ ಕತ್ತಿ: ಪ್ರವಾಸೋದ್ಯಮ
  • ಆರ್ ಶಂಕರ್: ಅಬಕಾರಿ
  • ಎಂಟಿಬಿ ನಾಗರಾಜ್: ಹಿಂದುಳಿದ ವರ್ಗಗಳ ಕಲ್ಯಾಣ

Related posts