ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲೂ ಹೊಸ ವರ್ಷದ ಸಂಭ್ರಮ. ಸೀಮಂತ್ ಕುಮಾರ್ ಸಿಂಗ್ ಸಹಿತ ಹಲವು ಮಂದಿ ಹಿರಿಯ ಅಧಿಕಾರಿಗಳು ನೂತನ ವರ್ಷಾರಂಭದಲ್ಲಿ ಭಡ್ತಿ ಹೊಂದಿದ್ದಾರೆ.
ಮಹತ್ವದ ಆದೇಶದಲ್ಲಿ ಎಡಿಜಿಪಿ ಡಾ.ಪಿ.ರವೀಂದ್ರ ಅವರು ಪೊಲೀಸ್ ಮಹಾನಿರ್ದೆಶಕರಾಗಿ ಭಡ್ತಿ ಹೊಂದಿದರೆ, ಹೆಚ್ಚುವರಿ ಪೊಲೀಸ್ ನಿರ್ದೇಶಕರಾಗಿ ಮುಂಬಡ್ತಿಯಾಗಿದ್ದು, ಭ್ರಷ್ಟಾಚಾರ ನಿಗ್ರಹ ದಳದ ಸಾರಥ್ಯವನ್ನು ಸರ್ಕಾರ ಅವರಿಗೆ ವಹಿಸಿದೆ.
ಈ ವರೆಗೂ ಕೇಂದ್ರ ವಲಯ ಪೊಲೀಸ್ ಮಹಾ ನಿರೀಕ್ಷಕರಾಗಿದ್ದ ಸೀಮಂತ್ ಕುಮಾರ್ ಸಿಂಗ್ಅವರು, ಬೆಂಗಳೂರು ಹೊರವಲಯದಲ್ಲಿರುವ ಟೊಯೋಟಾ ಕಾರ್ಮಿಕ ಬಿಕ್ಕಟ್ಟು, ವಿಸ್ಟ್ರಾನ್ ಸಂಸ್ಥೆಯ ವಿವಾದ, ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣಗಳ ಕಗ್ಗಂಟು ಸಂದರ್ಭಗಳಲ್ಲಿ ಕೈಗೊಂಡ ನಿಷ್ಟುರ ಕ್ರಮಗಳಿಂದಾಗಿ ದೇಶದ ಗಮನ ಸೆಳೆದಿದ್ದಾರೆ. ಇದೀಗ ಅವರು ಎಡಿಜಿಪಿಯಾಗಿ ಮುಂಬಡ್ತಿಯಾಗುತ್ತಿದ್ದಂತೆಯೇ ಎಸಿಬಿಯ ಮುಖ್ಯಸ್ಥ ಹುದ್ದೆ ಸಿಕ್ಕಿದೆ.
ಇದೇ ವೇಳೆ ಪವಾರ್ ಪ್ರವೀಣ್ ಮಧುಕರ್, ಎನ್ ಸತೀಶ್ ಕುಮಾರ್ ಸಹಿತ ಇನ್ನೂ ಕೆಲವು ಐಪಿಎಸ್ ಅಧಿಕಾರಿಗಳು ಡಿಐಜಿಯಿಂದ ಐಜಿಪಿ ಶ್ರೇಣಿಗೆ ಭಡ್ತಿಯಾಗಿದ್ದಾರೆ.
ಚೇತನ್ ಸಿಂಗ್ ರಾಥೋರ್, ಅಮಿತ್ ಸಿಂಗ್, ಶಶಿ ಕುಮಾರ್, ವೈ.ಎಸ್.ರವಿಕುಮಾರ್, ಪ್ರದೀಪ್, ಬಿ.ನಿಖಿಲ್, ಹರಿರಾಮ್ ಶಂಕರ್, ರಾಮರಾಜನ್, ಅಡ್ಡೂರು ಶ್ರೀನಿವಾಸಲು ಕೂಡಾ ಮುಂಬಡ್ತಿ ಹೊಂದಿದ್ದಾರೆ.