ಕೃತಕ ನೆರೆಯ ಆತಂಕ ಇವರಿಗಿಲ್ಲ, ಉದ್ಯಾನ ನಗರಿಯ ಈ ಪ್ರದೇಶದಲ್ಲಿ ಅಧ್ವಾನವೇ ಇಲ್ಲ! ರಾಮಲಿಂಗಾ ರೆಡ್ಡಿ ದೂರದೃಷ್ಠಿ ಯೋಜನೆಗೆ ಜನರ ಸಮ್ಮಾನ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾದರೆ ಸಾಕು ಯದ್ಯಾನ ನಗರಿ ಅಧ್ವಾನಕ್ಕೆ ಸಾಕ್ಷಿಯಾಗುತ್ತದೆ. ಆದರೆ ಸಲಿಕಾನ್ ಸಿಟಿಯ ಬಿಟಿಎಂ ಲೇಔಟ್ ಈಗ ಅಂತಹಾ ಅವಾಂತಗಳಿಂದ ದೂರ ಇದೆ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಸಚಿವ ರಾಮಲಿಂಗ ರೆಡ್ಡಿ ಅವರ ಇಚ್ಛಾಶಕ್ತಿಯ ಪರಿಣಾಮವಾಗಿ ಬಡಾವಣೆಯ ಪರಿಸ್ಥಿತಿ ಗಣನೀಯವಾಗಿ ಸುಧಾರಣೆಯಾಗಿದೆ.

ಮಳೆ ಬಂದಾಗ ಆಗುವ ಆನಾಹುತಗಳನ್ನು ನೋಡಿದ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ನಾಡಿನ ಗಮನಸೆಳೆದಿದೆ. ಕೋರಮಂಗಲ ಸಮೀಪದ ಪ್ರದೇಶವೊಂದು ಹಿಂದೆ ಹೇಗಿತ್ತು? ಈಗ ಹೇಗಿದೆ ಎಂಬ ಚಿತ್ರಣವು ಜನನಾಯಕ ಮನಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಂತಂತಿದೆ.

BTM- ವರ್ಷಗಳ ಹಿಂದೆ..!

ಕೋರಮಂಗಲ, ST BED, ಈಜಿಪುರ, ರಾಜೇಂದ್ರ ನಗರ, National Games Village ಮತ್ತು
ವೆಂಕಟೇಶ್ವರ ಬಡಾವಣೆ ಮಡಿವಾಳ,
ಪ್ರದೇಶಗಳಲ್ಲಿ ಮಳೆ ಬಂತೆಂದರೆ ಅಕ್ಷರಶಃ ನರಕ ಸದೃಶ ದೃಶ್ಯ ಕಾಣಸಿಗುತ್ತಿತ್ತು. ಕಳೆದ 20 ವರ್ಷಗಳ ಸಮಸ್ಯೆಗೆ ಪರಿಹಾರ ಕಂಡುಕೊಂಡ ರೀತಿ  ಮಾದರಿಯಾಗಿದೆ.

BTM- ವರ್ಷಗಳ ಹಿಂದೆ..!

ಒಬ್ಬ ಜನಪ್ರತಿನಿಧಿ ಯಾವ ರೀತಿ ತನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಜಲ್ವಂತ ಉದಾಹರಣೆಯಾಗಿ.ರಾಮಲಿಂಗಾ ರೆಡ್ಡಿ ಅವರ ವಿಧಾನಸಭಾ ಕ್ಷೇತ್ರ ಗುರುತಾಗಿದೆ ಎಂದು ಪ್ರಜ್ಞಾವಂತರು ಗುಣಗಾನ ಮಾಡುತ್ತಿದ್ದಾರೆ. ಜನರಿಗೆ ಮುಖ್ಯವಾಗಿ ಬೇಕಾಗಿರುವುದು ವಸತಿ ಸೌಲಭ್ಯ, ಸುಸಜ್ಜಿತ ರಸ್ತೆ, ಗುಣಮಟ್ಟದ ಶಿಕ್ಷಣ ಇವೆಲ್ಲವುಗಳು ಒಂದೇ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಜನರಿಗೆ ಸಿಗುವಂತೆ ಮಾಡಿರುವ ಹೆಗ್ಗಳಿಕೆ ರಾಮಲಿಂಗಾರೆಡ್ಡಿ ಅವರದ್ದು. ಒಲ್ಲಿನ ಜನ ಸತತವಾಗಿ 8 ಬಾರಿ ಆಯ್ಕೆ ಮಾಡಿರುವುದಕ್ಕೆ ಕ್ಷೇತ್ರದ ಅಭಿವೃದ್ಧಿ ಮೂಲಕವೇ ರಾಮಲಿಂಗ ರೆಡ್ಡಿಯವರು ಕೃತಜ್ಞತೆ ಸಲ್ಲಿಸಿದ್ದಾರೆ ಎಂಬುದು ಊರ ಹಿರಿಯರ ಮಾತುಗಳು.  

BTM- ವರ್ಷಗಳ ಹಿಂದೆ..!

ಆದರೆ ಈಗ ಬಿಟಿಎಂ ಸ್ಥಿತಿ ಸುಧಾರಣೆಯಾಗಿದೆ. ಬಿಟಿಎಂ ಲೇಔಟ್ ಕ್ಷೇತ್ರದ ಜನರ ಗುಂಪೊಂದು ಸಚಿವ ರಾಮಲಿಂಗ ರೆಡ್ಡಿ ಅವರನ್ನು ಭೇಟಿಯಾಗಿ ಕೃತಜ್ಞತೆ ಸಮರ್ಪಿಸಿದ ಸನ್ನಿವೇಶ ಗಮನಸೆಳೆಯಿತು. ಬೆಂಗಳೂರು ತುಂಬೆಲ್ಲಾ ಅಧ್ವಾನದ ಸ್ಥಿತಿ ಇದ್ದರೆ ಬಿಟಿಎಂ ಲೇಔಟ್ ಮಂದಿ ನೆಮ್ಮದಿಯ ದಿನಗಳನ್ನು ಕಂಡಿದ್ದು, ಇದಕ್ಜೆ ಕಾರಣವಾಗಿರುವುದು ಮಳೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿರುವ ಕಾಮಗಾರಿಗಳು. ಈ ಸಂಬಂಧ ಈ ಪ್ರಜ್ಞಾವಂತರ ಗುಂಪು ಸಚಿವರನ್ನು ಭೇಟಿಯಾಗಿ ಅಭಿನಂಧಿಸಿದೆ.

2015 ಕೋರಮಂಗಲದ ಚಿತ್ರಣ ಎಲ್ಲರ ಕಣ್ಣಮುಂದೆ ಬಂದು ನಿಲ್ಲುತ್ತದೆ. ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡ ಲೇಔಟ್ ಗಳು, ನೀರು ತುಂಬಿದ ರಸ್ತೆಗಳು, ಮನೆಗಳು, ಜನರು ಮನೆಯಿಂದ ಹೊರಗೆ ಬರಲಾಗದೆ , ನೀರು ಊಟಕ್ಕೆ ಪರದಾಡುವ ಪರಿಸ್ಥಿತಿ ಯಾರೊಬ್ಬರೂ ಇದನ್ನು ಮರೆತಿರಲಾರರು. ಇಂತಹ ಅವಸ್ಥೆಗಳಿಗೆಲ್ಲಾ ಕಾರಣ ಕೆಟ್ಟ ಅವೈಜ್ಞಾನಿಕ ನಗರ ಯೋಜನೆ (Town Planning), ಕೆರೆಗಳ ಆಕ್ರಮಣ, ಎಲ್ಲೆಂದರಲ್ಲಿ ಮನೆ‌ ನಿರ್ಮಾಣ, ವ್ಯವಸ್ಥಿತವಲ್ಲದ ಚರಂಡಿ ಯೋಜನೆಗಳು.

ಇವೆಲ್ಲವುಗಳ ಹೊರತಾಗಿಯೂ ಹೇಗೆ ಇಂತಹ ಪರಿಸ್ಥಿತಿಗೆ ಪರಿಹಾರ ಹುಡುಕಬಹುದು ಎಂಬುದು ಕೋರಮಂಗಲದ ಇವತ್ತಿನ ಚಿತ್ರಣ ನೋಡಿದರೆ‌ ತಿಳಿಯುತ್ತದೆ. ಹಿಂದೆದೂ ಕಂಡರಿಯದಂತಹ ಮಹಾಮಳೆ 2024 ರಲ್ಲಿ ಬೆಂಗಳೂರಿನಲ್ಲಿ ದಾಖಲಾಗಿದೆ. ಹಲವಾರು ಲೇಔಟ್ ಗಳು ಮಳೆಯಿಂದ ಮುಳುಗಿವೆ, ಜನರು‌ ಪರದಾಡುವ ದೃಶ್ಯ ನೋಡಲಾಗುತ್ತಿಲ್ಲ. ಅದಾಗ್ಯೂ ಸಹ ಕೋರಮಂಗಲದಲ್ಲಿ ಆ ರೀತಿಯ ಯಾವುದೇ ಚಿತ್ರಣ ಕಾಣಸಿಗದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ರಾಮಲಿಂಗಾ ರೆಡ್ಡಿ ಅವರ ದೂರದೃಷ್ಟಿ ಯೋಜನೆಗಳು, ನಿರಂತರವಾಗಿ ಸ್ಥಳೀಯ Resident Welfare Associations ಗಳ ಜೊತೆ ಸಂವಹನ, ಸಂಪರ್ಕ ಸಾಧಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ತೀವ್ರ ಗಮನಹರಿಸುವಿಕೆ, ವೈಜ್ಞಾನಿಕವಾಗಿ ಚರಂಡಿ ವ್ಯವಸ್ಥೆಗಳಿಗೆ ಕ್ರಮ, ಪ್ರತಿಯೊಂದು ವಾರ್ಡ್ ಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ವೈಯಕ್ತಿಕ ಕಾಳಜಿ ನೀಡುವಿಕೆ ಕಾರಣವೆಂದು RWA, ವಾರ್ಡ್ ಅಧ್ಯಕ್ಷರುಗಳು, ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಯಣ್ಣ, ರಘು 4ನೇ ಬ್ಲಾಕ್, ರಾಜೇಂದ್ರ ಬಾಬು, ಎಸ್ ಟಿ ಬೆಡ್, ಪಿ ಎಂ ವಿಶ್ವನಾಥ್ 3ನೇ ಬ್ಲಾಕ್ ,  ಸುರೇಶ್ 6ನೇ ಬ್ಲಾಕ್, ಕಿಶನ್ ನಾಯಕ್ , ಅಜಯ್ ರೆಡ್ಡಿ 2ನೇ ಬ್ಲಾಕ್ ಕೋರಮಂಗಲ, ಸುವರ್ಣ ಅಗರವಾಲ್, ಗೋವರ್ಧನ್ ರೆಡ್ಡಿ, ಬ್ಲಾಕ್ ಅದ್ಯಕ್ಷರು, ನಿತಿನ್ ಶೇಷಾದ್ರಿ, ಮಾಜಿ ಅಧ್ಯಕ್ಷರು, ಜಿ ಎಂ ಶೆಟ್ಟಿ, ಮಾಜಿ ಅಧ್ಯಕ್ಷರು. ಪದ್ಮಶ್ರೀ 1ನೇ ಬ್ಲಾಕ್,  ಪಿಲ್ಲಪ್ಪ 6ನೇ ಬ್ಲಾಕ್, ಎನ್‌ ಜಿ ವಿ ಶ್ರೀ.ರಾಜೇಂದ್ರ ಮಲ್ಲಪ್ಪ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts