‘ಮುಂದಿನ ಪ್ರಧಾನಿ ಮೋದಿ ಅಲ್ಲ, ಮಹಿಳೆ ಕೈಗೆ ಅಧಿಕಾರ’; ಸ್ಫೋಟಕ ಭವಿಷ್ಯವಾಣಿ ಸೃಷ್ಟಿಸಿದ ಸಂಚಲನ.

ತುಮಕೂರು: ಮುಂಬರುವ ಅವಧಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಲ್ಲ. ಮಿತ್ರಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬರಲಿದ್ದು ಮೋದಿಯವರ ಸ್ಥಾನವನ್ನು ತುಂಬಲಿದ್ದಾರಂತೆ. ಈ ಕುರಿತ ಭಾವಿಧ್ಯವಾಣಿಯೊಂದು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಈ ಭವಿಷ್ಯವಾಣಿ ನುಡಿದಿರುವುದು ಬೇರೆ ಯಾರೂ ಅಲ್ಲ. ಈ ವರೆಗೂ ರಾಜ್ಯ ರಾಜಕಾರಣಗಳ ಏಳು ಬೀಳಿನ ಕುರಿತಂತೆ ಭವಿಷ್ಯ ನುಡಿಯುತ್ತಿದ್ದ ರಾಜ್ಯದ ಪ್ರಸಿದ್ಧ ತಿಪಟೂರಿನ ನೊಣವಿನಕೆರೆಯ ಶನಿ ದೇಗುಲದ ಕಾಲಜ್ಞಾನಿ ಡಾ ಯಶವಂತ ಗುರೂಜಿ. ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಗಳ ಬಗ್ಗೆ ಇವರು ನುಡಿದಿದ್ದ ಭವಿಷ್ಯ ಕುತೂಹಲದ ಕೇಂದ್ರ ಬಿಂದುವಾಗಿತ್ತು. ಅಷ್ಟೇ ಅಲ್ಲ, ಡಿಕೆಶಿ ಮುಖ್ಯಮಂತ್ರಿಯಾಗಲ್ಲ, ಸಿದ್ದರಾಮಯ್ಯ ಸಿಎಂ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ನುಡಿದಿದ್ದ ಭವಿಷ್ಯವೂ ಅಚ್ಚರಿ ಎಂಬಂತಿತ್ತು. ಇದೀಗ ಮುಂದಿನ ಪ್ರಧಾನಿ ಬಗ್ಗೆ ನುಡಿರುವ ಕಾಲಜ್ಞಾನ ಭವಿಷ್ಯವಾಣಿ ಕೂಡಾ ಕುತೂಹಲದ ಸಂಗತಿಯೆನಿಸಿದೆ.

ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣಾ ನಡೆಯಲಿದ್ದು ರಾಜಕೀಯ ಪಕ್ಷಗಳಿಂದ ಭರ್ಜರಿ ತಯಾರಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ನೊಣವಿನಕೆರೆಯ ಶನಿ ದೇಗುಲದ ಕಾಲಜ್ಞಾನಿ ಡಾ ಯಶವಂತ ಗುರೂಜಿ ಅವರ ಭವಿಷ್ಯವಾಣಿ ಕುರಿತಂತೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದು ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಕುತೂಹಲವೂ ಹೆಚ್ಚಾಗಿದೆ.

ಏನಿದು ಭವಿಷ್ಯವಾಣಿ?

ಕಳೆದ 10 ವರ್ಷಗಳಲ್ಲಿ ಭಾರತದ ವರ್ಚಸ್ಸನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ ನರೇಂದ್ರ ಮೋದಿ ಅವರು ಮುಂದಿನ ಅವಧಿಗೂ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕರು ವಿಶ್ವಾಸ ಹೊಂದಿದ್ದರೆ, ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ನಾಯಕರು ಬಿಜೆಪಿಯ ಸೈದಾಂತಿಕ ಎದುರಾಳಿ ಪಕ್ಷಗಳನ್ನು ಒಗ್ಗೂಡಿಸಿ ‘ಇಂಡಿಯಾ’ ಒಕ್ಕೂಟ ರಚಿಸಿದ್ದಾರೆ. ಈ ಮೂಲಕ ಮೋದಿ ಅವರನ್ನು ಮಣಿಸಲು ಪ್ರತಿಪಕ್ಷಗಳು ಚಕ್ರವ್ಯೂಹ ರಚಿಸುತ್ತಿವೆ. ಅದೇ ಹೊತ್ತಿಗೆ ಮೋದಿ ಅವರ ತಾರಾ ಬಲವೂ ಕುಗ್ಗುತ್ತಿದೆ ಎಂಬುದು ಕಾಲಜ್ಞಾನಿ ಡಾ.ಯಶವಂತ ಗುರೂಜಿ ಭವಿಷ್ಯ ನುಡಿದಿದ್ದಾರೆ ಎಂಬುದು ಮಾಧ್ಯಮಗಳ ಉಲ್ಲೇಖ.

ಶಿವರಾತ್ರಿ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆಯಂತೆ. ಮುಂದಿನ ಬಾರಿ ಈ ದೇಶದ ಚುಕ್ಕಾಣಿ ಮಹಿಳೆಯ ಕೈಗೆ ಹೋಗಲಿದೆ. ಮಹಿಳೆಯೇ ದೇಶವನ್ನು ಆಳುತ್ತಾಳೆ. ಮಹಾಶಿವರಾತ್ರಿ ಹಬ್ಬದ ಬಳಿಕ ಶಕ್ತಿ ಸ್ವರೂಪವಾದ ಮಹಿಳೆ ದೇಶವನ್ನು ಆಳುತ್ತಾಳೆ. ಇದು ಮಾರ್ಚ್‌ ಬಳಿಕ ಬಳಿಕ ಶತಃಸಿದ್ಧ ಎಂದು ಯಶವಂತ ಗುರೂಜಿ ಭವಿಷ್ಯ ನುಡಿದಿದ್ದಾರೆ. ‘ನಮ್ಮ ಕಾಲಜ್ಞಾನ ಭವಿಷ್ಯದ ಪ್ರಕಾರ ಒಂದೇ ಪಕ್ಷದ ಕೈಯಲ್ಲಿ ಅಧಿಕಾರದ ಕೇಂದ್ರೀಕೃತವಾಗಿರಲು ಸಾಧ್ಯವಿಲ್ಲ. ಮಿತ್ರಪಕ್ಷಗಳ ಸಹಾಯದಿಂದ ಒಂದು ಒಕ್ಕೂಟ ಅಧಿಕಾರಕ್ಕೆ ಬರಲಿದ್ದು. ಆ ಸಂದರ್ಭದಲ್ಲಿ ಮಹಿಳೆ ಪ್ರಧಾನಿಯಾಗಬಹುದಾಗಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

‘ನಿರಾಶೆ ಬೇಡ’ ಮೋದಿ ಅಭಿಮಾನಿಗಳಿಗೆ ಧೈರ್ಯ.

ಮಹಾ ಶಿವರಾತ್ರಿ ನಂತರದ ಬೆಳವಣಿಗೆಯ ಬಗ್ಗೆ ಭಾವಿವಿಷ್ಯ ನುಡಿದಿರುವ ಕಾಲಜ್ಞಾನಿ ಯಶವಂತ ಗುರೂಜಿ , ಶಿವರಾತ್ರಿ ಒಳಗಡೆ ಚುನಾವಣೆ ನಡೆದರೆ ಮೋದಿಗೆ ಪಟ್ಟ ಸಿಗಲಿದೆ ಎಂದೂ ಹೇಳಿದ್ದಾರೆ. ಆದರೆ ಮಾರ್ಚ್ ನಂತರ ಚುನಾವಣೆ ನಡೆದರೆ ಬೇರೆ ಪಕ್ಷ ಅಧಿಕಾರಕ್ಕೆ ಬರಲಿದೆ. ಅನಂತರ ದೇಶವನ್ನು ಮಹಿಳೆ ಆಳುವುದು ಶತಸಿದ್ಧ ಎಂದವರು ವಿಶ್ಲೇಷಿಸಿದ್ದಾರೆನ್ನಲಾಗಿದೆ.

ಮಕರ ಸಂಕ್ರಾಂತಿಯ ಕುತೂಹಲ..!

ಮುಂಬರುವ ಚುನಾವಣಾ ಬಳಿಕ ಪ್ರಧಾನಿ ಯಾರಾಗುತ್ತಾರೆ ಎಂಬ ಗುಟ್ಟನ್ನು ಯಶವಂತ ಗುರೂಜಿ ಬಿಟ್ಟುಕೊಟ್ಟಿಲ್ಲ. ಪ್ರಧಾನಿ ಯೋಗವಿರುವ ಸ್ತ್ರೀ ಯಾರೆಂದು ಮಕರ ಸಂಕ್ರಾಂತಿಯಂದು ಹೇಳಲಾಗುತ್ತದೆ ಎಂದಿದ್ದಾರೆ. ಸಂವತ್ಸರಗಳ ಫಲಾಫಲ ಆಧರಿಸಿ ಗಮನಿಸಿದಾಗ ಇಷ್ಟು ಸಂಗತಿಗಳನ್ನು ಹೇಳಲಾಗುತ್ತಿದೆ. ಮುಂದಿನ ಪ್ರಧಾನಿ ಆಗುವ ಮಹಿಳೆ ಯಾರು ಎಂಬುದನ್ನು ತಿಳಿದುಕೊಳ್ಳಲು ಸಂಕ್ರಾಂತಿಯ ಕಾಲಜ್ಞಾನದವರೆಗೂ ಕಾಯಲೇಬೇಕು ಎಂದು ಹೇಳುವ ಮೂಲಕ ವಿದ್ಯಮಾನಗಳ ಬಗೆಗಿನ ಕುತೂಹಲವನ್ನು ಹೆಚ್ಚಿಸಿದ್ದಾರೆ.

Related posts