ಬಿಜೆಪಿ ಮತ್ತೆ ಜಯಭೇರಿ: ಎಕ್ಸಿಟ್ ಪೋಲ್ ರಿಸಲ್ಟ್ ನಂತರ ಹೆಚ್ಚಿದ ಕುತೂಹಲ

ದೆಹಲಿ: ಬಿಜೆಪಿಯ ಗೆಲುವಿನ ಅಭಿಯಾನ ಮುಂದುವರಿಯುವ ಸೂಚನೆಗಳು ಗೊತ್ತಾಗುತ್ತಿವೆ. ತೀವ್ರ ಕುತೂಹಲ ಕೆರಳಿಸಿರುವ ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಪಾರುಪತ್ಯ ಸಾಧಿಸಲಿದೆ ಎಂದು ಮತದಾನೋತ್ತರ ಸಮೀಕ್ಷೆ ಹೇಳಿದೆ.

ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಮುಗಿದಿದ್ದು, ಮತಗಟ್ಟೆ ಸಮೀಕ್ಷೆಗಳ ಪ್ರಕಾರ, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಗಳತ್ತ ಸಮೀಕ್ಷಾ ಫಲಿತಾಂಶ ಬೊಟ್ಟುಮಾಡಿದೆ. ಮೇಘಾಲಯದಲ್ಲಿ ಎನ್‌ಪಿಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ.

ಇಂಡಿಯಾ ಟುಡೆ ಎಕ್ಸಿಟ್ ಪೋಲ್ ಪ್ರಕಾರ ಮತದಾನೋತ್ತರ ಫಲಿತಾಂಶ ಹೀಗಿದೆ:

ತ್ರಿಪುರಾ:
ಒಟ್ಟು ಸ್ಥಾನಗಳು – 60
ಬಿಜೆಪಿ – 36-45
ತಿಪ್ರಾ ಮೋಥಾ 9-16

 

ನಾಗಾಲ್ಯಾಂಡ್‌:

ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟ – 35-43
ಕಾಂಗ್ರೆಸ್ : 1-3
ಎನ್‌ಪಿಎಫ್ : 2-5

 

ಮೇಘಾಲಯ:
ನ್ಯಾಷನಲ್ ಪೀಪಲ್ಸ್ ಪಾರ್ಟಿ : 21-26

Related posts