ಬೆಂಗಳೂರು: ರಾಜ್ಯದ ಜನರಿಗೆ ಚಂದ್ರ ಗ್ರಹಣವಷ್ಟೇ ಅಲ್ಲ, ಕಾವೇರಿ ಗ್ರಹಣ, ವಿದ್ಯುತ್ ಗ್ರಹಣ.. ಹೀಗೆ ಅನೇಕ ಗ್ರಹಣಗಳು ಕಾಡುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಟೀಕಿಸಿದೆ.
ಬರಗಾಲದಿಂದ ರಾಜ್ಯದ ರೈತರ ಬಗ್ಗೆ ಸಿದ್ದರಾಮಯ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಡಲಾಗಿರುವ ಪೋಸ್ಟ್ ಗಮನಸೆಳೆದಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಇಡೀ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಸಿಎಂ ಸಿದ್ದರಾಮಯ್ಯ ಅವರ ನೆರಳಿನ ಫೋಟೋವನ್ನು ಬಳಸಿ ಮಾಡಲಾಗಿರುವ ಈ ಪೋಸ್ಟ್’ನಲ್ಲಿ ರಾಜ್ಯದ ಜನರನ್ನು ಕಾಡುತ್ತಿರುವ ಗ್ರಹಣಗಳ ಪಟ್ಟಿಯನ್ನು ಬಿಜೆಪಿ ನೀಡಿದೆ. ವಿದ್ಯುತ್‌ಗೆ ಗ್ರಹಣ, ಅಭಿವೃದ್ಧಿಗೆ ಗ್ರಹಣ, ಅನ್ನಭಾಗ್ಯಕ್ಕೆ ಗ್ರಹಣ, ಕೈಗಾರಿಕೆಗಳಿಗೆ ಗ್ರಹಣ, ಕುಡಿಯುವ ನೀರಿಗೆ ಗ್ರಹಣ, ಕೃಷಿ ಉತ್ಪನ್ನಗಳಿಗೆ ಗ್ರಹಣ, ಬ್ರ್ಯಾಂಡ್ ಬೆಂಗಳೂರಿಗೆ ಗ್ರಹಣ ಎಂಬ ಪಟ್ಟಿಯನ್ನು ಪ್ರಕಟಿಸಿರುವ ಬಿಜೆಪಿ, 30 ವರ್ಷಗಳ ಹಿಂದಿನ ‘ಆ ದಿನಗಳ ಗ್ರಹಣ’ ಇದೀಗ ಸಿದ್ದರಾಮಯ್ಯರವರ ಸರ್ಕಾರದ ಕೃಪೆಯಿಂದ ಕರ್ನಾಟಕಕ್ಕೆ ಮತ್ತೊಮ್ಮೆ ವಕ್ಕರಿಸಿದೆ ಎಂದು ವಿಶ್ಲೇಷಿಸಿದೆ.
ರಾಜ್ಯದಲ್ಲಿ @INCKarnataka ಬಂದಿದೆ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ:
🌗 ಕಾವೇರಿಗೆ ಗ್ರಹಣ
🌗 ವಿದ್ಯುತ್‌ಗೆ ಗ್ರಹಣ
🌗 ಅಭಿವೃದ್ಧಿಗೆ ಗ್ರಹಣ
🌗 ಅನ್ನಭಾಗ್ಯಕ್ಕೆ ಗ್ರಹಣ
🌗 ಕೈಗಾರಿಕೆಗಳಿಗೆ ಗ್ರಹಣ
🌗 ಕುಡಿಯುವ ನೀರಿಗೆ ಗ್ರಹಣ
🌗 ಕೃಷಿ ಉತ್ಪನ್ನಗಳಿಗೆ ಗ್ರಹಣ
🌗 ಬ್ರ್ಯಾಂಡ್ ಬೆಂಗಳೂರಿಗೆ ಗ್ರಹಣ30 ವರ್ಷಗಳ ಹಿಂದಿನ "ಆ ದಿನಗಳ… pic.twitter.com/xYOlVKRSbd
— BJP Karnataka (@BJP4Karnataka) October 29, 2023