ದೇಶಕ್ಕೆ ಈಗ ಅಗತ್ಯವಿರುವುದು ‘ಒಂದು ರಾಷ್ಟ್ರ, ಒಂದು ಶಿಕ್ಷಣ’; ಕೇಜ್ರಿವಾಲ್

ದೆಹಲಿ; ಒಂದು ರಾಷ್ಟ್ರ, ಒಂದು ಚುನಾವಣೆ ಯೋಜನೆಯ ಕುರಿತ ಚರ್ಚೆನಡೆದಿರುವಾಗಲೇ  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕುರೂಹಲಕಾರಿ ಅಭಿಪ್ರಾಯ ಮುಂದಿಟ್ಟಿದ್ದಾರೆ, ನಮಗೆ ‘ಒಂದು ರಾಷ್ಟ್ರ, ಒಂದು ಶಿಕ್ಷಣ’ ಅವಶ್ಯಕವಿದೆ ಎಂದು ಅವರು ಹೇಳಿದ್ದಾರೆ.

ಹರಿಯಾಣದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ, ಕೇಜ್ರಿವಾಲ್, ಬಿಜೆಪಿಯ ನಿಲುವಿನ ಬಗ್ಗೆ ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದರು. ತಮ್ಮ ದೃಷ್ಟಿಯಲ್ಲಿ, ಚುನಾವಣೆಗಳ ಸಂಖ್ಯೆಗಿಂತ ಗುಣಮಟ್ಟದ ಶಿಕ್ಷಣವೇ ಪ್ರಾಧಾನ್ಯವುಳ್ಳದ್ದು. ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಮಟ್ಟದ ಶಿಕ್ಷಣ ಹಾಗೂ ಗೌರವ ಸಿಗಬೇಕು ಎಂದು ಪ್ರತಿಪಾದಿಸಿದರು, ಸಾಮಾನ್ಯ ಜನರಿಗೆ ಸಾಧಾರಣ ಚುನಾವಣೆಯಿಂದ ಏನು ಲಾಭವಿದೆ ಎಂದು ಪ್ರಶ್ನಿಸಿದ ಕೇಜ್ರಿವಾಲ್, ರಾಷ್ಟ್ರದ ಶಿಕ್ಷಣ ಮತ್ತು ಸಾಮಾಜಿಕ ಸ್ಥಿತಿಯ ಮೇಲೆ ಗಮನಕೇಂದ್ರೀಕರಿಸುವ ಅಗತ್ಯವಿದೆ ಎಂದರು.

Related posts