ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ರಾಚಮಾನಹಳ್ಳಿಯ ಪಿ. ಶಶಿಕುಮಾರ್ ರವರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎನ್. ಸಂಜೀವ್ ರಾಜ್ ರವರ ಮಾರ್ಗದರ್ಶನದಲ್ಲಿ ಪಿ. ಶಶಿಕುಮಾರ್ ಮಂಡಿಸಿದ “ಸಿನೆಮ್ಯಾಟಿಕ್ ಕಾನ್‌ಟ್ರಿಬ್ಯೂಷನ್ಸ್ ಆಫ್ ಡಾ. ಗಿರೀಶ್ ಕಾರ್ನಾಡ್: ಅನ್ ಅನಾಲಿಟಿಕಲ್ ಸ್ಟಡಿ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

