ನಾಡಿನೆಲ್ಲಡೆ ಯುಗಾದಿ ಸಂಭ್ರಮ ಗರಿಗೆದರಿದೆ. ಸಾಂಪ್ರದಾಯಿಕ ವರ್ಷಾರಂಭದ ದಿನವಾದ ಇಂದು ಸಂಭ್ರಮದ ಹಬ್ಬವಾಗಿ ಆಚರಿಸಲಾಗುತ್ತಿದೆ.
ಭಾರತೀಯ ಪರಂಪರೆಯಲ್ಲಿ ಯುಗಾದಿಯಂದು ಸಂವತ್ಸರ (ಹೊಸ ವರ್ಷ) ಆರಂಭ. ಹಾಗಾಗಿ ವರ್ಷದ ಮೊದಲ ದಿನವನ್ನು ಸಂಭ್ರಮ ಸಡಗರದಿಂದ ಆಚರಿಸಿ ಆಪ್ತರನ್ನು ಹರಸುವುದು ಈ ನೆಲದ್ದೇ ಆದ ಸಂಪ್ರದಾಯ. ಹಾಗಾಗಿ ಎಲ್ಲೆಲ್ಲೂ ಶುಭಾಶಯಗಳ ವಿನಿಮಯ ಜೋರಾಗಿ ಸಾಗಿದೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಹಂಚಿಕೊಂಡಿರುವ ಯುಗಾದಿ ಶುಭಾಶಯ ಗಮನಸೆಳೆದಿದೆ. ಕನ್ನಡದಲ್ಲೇ ಶುಭ ಹಾರೈಸಿರುವ ಅವರು, ಕನ್ನಡಿಗರಿಗೆ ಆಪ್ತರಾಗಿ ನಿಂತಂತಿದೆ. ‘ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು, ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ’ ಎಂದು ಅವರು ಪ್ರಾರ್ಥಿಸಿದ್ದಾರೆ.
ಎಲ್ಲರಿಗೂ ಸಂತಸದ ಯುಗಾದಿಯ ಶುಭಾಶಯ ! pic.twitter.com/SEYqoPUsHl
— Narendra Modi (@narendramodi) March 22, 2023