ಬೆಂಗಳೂರು: ಬೆಂಗಳೂರು ಪೊಲೀಸರು ದರ್ಶನ ಅಭಿಮಾನಿಗೆ ಶಾಕ್ ನೀಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 2ರಂದು ನಡೆದ ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ದರ್ಶನ ಅಭಿಮಾನಿಯೊಬ್ಬನನ್ನು ಕ್ರೀಡಾಂಗಣದಿಂದ ಬಲವಂತವಾಗಿ ಹೊರಗೆ ಕಳುಹಿದ್ದಾರೆ. ಅದಕ್ಕೆ ಕಾರಣ ನಟ ದರ್ಶನ್ ಫೋಟೋ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ನಡುವೆ IPL ಪಂದ್ಯ ವೀಕ್ಷಿಸಲು ಆಗಮಿಸಿದ್ದ ಯುವಕನೊಬ್ಬ ನಟ ದರ್ಶನ್ ಭಾವಚಿತ್ರ ಹಿಡಿದುಕೊಂಡು ಬಂದಿದ್ದ. ಅದನ್ನು ಕಂಡ ಭದ್ರತಾ ಸಿಬ್ಬಂದಿ ಫೋಟೋದ ಜೊತೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ಕೊಟ್ಟಿಲ್ಲ. ಅದಾಗಲೇ ಆ ಯುಕನನ್ನು ಕ್ರೀಡಾಂಗಣದಿಂದ ಹೊರ ದಬ್ಬಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿನ್ನೆಯ ಪಂದ್ಯದ ಡಾಗರ್ ಕ್ರಿಮಿನಲ್ ಬೂಸ ದಾಸಪ್ಪ ಫೋಟೋವನ್ನು ಪೊಲೀಸರು ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ತಡೆದರು.!🐷🥺😭#CriminalDarshan#RCBvsGT pic.twitter.com/COcGlLel97
— 🐐♑ (@Rohi45Appu) April 3, 2025
ಈ ನಡುವೆ, ದರ್ಶನ್ ಅಭಿಮಾನಿಯ ನಡೆಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಪಂದ್ಯಕ್ಕೂ ದರ್ಶನ್ ಅವರಿಗೂ ಏನು ಸಂಬಂಧವಿದೆ. ಅವರ ಫೋಟೋ ತರುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಕೆಲವರು, ಇತರ ನಂತರ ಬ್ಯಾನರ್ ಪ್ರದರ್ಶಿಸಿರುವ ವೀಡಿಯೋವನ್ನು ಟ್ಯಾಗ್ ಮಾಡಿ ಪೊಲೀಸರ ನಡೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.