ಕರ್ನಾಟಕದ ಪುರಾಣ ಪ್ರಸಿದ್ಧ ಶ್ರೀ ಪೊಳಲಿ ಕ್ಷೇತ್ರ ಒಂದಿಲ್ಲೊಂದು ಮಹಿಮೆಯಿಂದ ಗಮನಸೆಳೆಯುತ್ತಿರುತ್ತದೆ. ಶತಮಾನಗಳಷ್ಟು ಹಳೆಯ ಈ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ 105 ವರ್ಷಗಳ ಬಳಿಕ ನಡೆದ ‘ಶತ ಚಂಡಿಕಾಯಾಗ’ ಆಸ್ತಿಕ ವಲಯದ ಕುತೂಹಲದ ಕೇಂದ್ರಬಿಂದುವಾಗಿತ್ತು. ಇದೀಗ ಪುರಾಣ ಪ್ರಸಿದ್ಧ ‘ಚೆಂಡಿನ ಉತ್ಸವ’ಕ್ಕೆ ಪೊಳಲಿ ಕ್ಷೇತ್ರ ಸಜ್ಜಾಗಿರುವಂತೆಯೇ ಶ್ರೀ ಕ್ಷೇತ್ರದ ಗುಣಗಾನ ಮಾಡಿರುವ ಹಾಡೊಂದು ಬಿಡುಗಡೆಯಾಗಿದೆ.
ಪೊಳಲಿ ಸನ್ನಿಧಾನದಲ್ಲಿ ಮಾರ್ಚ್ 12ರಂದು ಬಿಡುಗಡೆಯಾಗಿರುವ ‘ಪುರಲ್ದ ಸಿರಿಯೇ..’ ಹೆಸರಿನ ಭಕ್ತಿ ಗಾಯನದ ವೀಡಿಯೊ ನಾಡಿನ ಆಸ್ತಿಕ ಸಮೂಹದ ಚಿತ್ತವನ್ನು ಸೂಜಿಗಲ್ಲಿನಂತೆ ಸೆಳೆದಿಟ್ಟುಕೊಳ್ಳುವಂತಿದೆ.
ದೇವೀ ನೆಲೆಯಾಗಿರುವ ಪೊಳಲಿಯನ್ನು ತುಳು ಭಾಷೆಯಲ್ಲಿ ‘ಪುರಾಲ್’ ಎಂದು ಕರೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಭಕ್ತ ಸೀಮೆಗೆ ಪೊಳಲಿ ರಾಜರಾಜೇಶ್ವರಿಯೇ ನಾಡಿನ ಅಧಿದೇವತೆ. ಈ ಸೀಮೆಯುದ್ದಕ್ಕೂ ಪೊಳಲಿ ದೇವಿಯನ್ನು ‘ಪುರಲ್ದ ಉಳ್ಳಾಲ್ತಿ’ ಎಂದೇ ಆಸ್ತಿಕರು ಕರೆಯುತ್ತಾರೆ. ದುಃಖ ದುಮ್ಮಾನಗಳಿಗೆ ಸಾಂತ್ವಾನ ನೀಡುವ, ಗೆಲುವಿಗೆ ಕೃಪೆ ತೋರುವ ‘ಅಮ್ಮಾ’ ಎಂದೇ ಭಕ್ತರು ನಂಬಿದ್ದಾರೆ. ಈ ನಂಬಿಕೆಗಳನ್ನೇ ಆಧಾರವಾಗಿಟ್ಟು ದೇವಿಪ್ರಸಾದ್ ಎಂ. ದೇವಂದಬೆಟ್ಟು ಅವರು ”ಪುರಲ್ದ ಸಿರಿಯೇ..’ ಎಂಬ ಭಕ್ತಿ ಗಾಯನವನ್ನು ನಿರ್ಮಾಣ ಮಾಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಯುವ ಪ್ರತಿಭೆಯಾಗಿರುವ ದೇವಿಪ್ರಸಾದ್ ಎಂ. ದೇವಂದಬೆಟ್ಟು ಅವರು ಹಲವಾರು ಧ್ವನಿ ಮುದ್ರಣ ಮೂಲಕ ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಸೆಳೆದವರು. ತಮ್ಮ ಆದ್ಯಾತ್ಮಿಕ ಆಸಕ್ತಿಯನ್ನು ‘ದೇವಲೋಕ’ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ವ್ಯಕ್ತಪಡಿಸುತ್ತಿದ್ದು, ಭಕ್ತಿ ಗಾಯನವನ್ನು ಅರ್ಪಿಸುತ್ತಿದ್ದಾರೆ. ಇದೀಗ ಬಿಡುಗಡೆಯಾಗಿರುವ ‘ಪುರಲ್ದ ಸಿರಿಯೇ..’ ನಾಡಿನ ಜನರ ಗಮನಸೆಳೆದಿದೆ. ದೇವಿಪ್ರಸಾದ್ ಎಂ ದೇವಂದಬೆಟ್ಟು ಅವರದ್ದೇ ಸಾಹಿತ್ಯ. ಇದರಲ್ಲಿನ ಗಾಯನ, ನಿರ್ದೇಶನ, ವೀಡಿಯೋಗ್ರಫಿ ಕೂಡಾ ಅವರದ್ದೇ. ಪ್ರಶಾಂತ್ ಕುಲಾಲ್ ಕನಪಾಡಿ ಅವರು ಸಹಗಾಯಕರಾಗಿ ಸಾಥ್ ಕೊಟ್ಟಿದ್ದಾರೆ.
ಪುರಲ್ದ ಸಿರಿಯೇ..’ ನಿರ್ಮಾಪಕರಾಗಿ ರಮಾನಂದ ಶೆಟ್ಟಿ ಬೆಂಜನಪದವು, ನೋಣಯ್ಯ ಶೆಟ್ಟಿ ಬ್ರಹ್ಮರಕೂಟ್ಲು, ಓಮಯ್ಯ ಜೆ.ಕೋಟ್ಯಾನ್ ಕನಪಾಡಿ, ತಾರಾನಾಥ ಕೊಟ್ಟಾರಿ ತೇವು ಫರಂಗಿಪೇಟೆ ಮೊದಲಾದ ಯುವ ಪ್ರತಿಭೆಗಳೂ ಸಾಥ್ ನೀಡಿವೆ.
ತೃಪ್ತಿ ಕೆ.ವಿ. ಜಾರಂದಗುಡ್ಡೆ ಅವರ ನೃತ್ಯ ಸಂಯೋಜನೆಯಲ್ಲಿ ಪುಟಾಣಿಗಳಾದ ಧೃತಿ, ಪ್ರಣತಿ, ವೃಶಿಕಾ, ಹರ್ಷಾ, ಅನ್ವಿ, ಭೂಮಿಕಾ, ನೇಹಾ ಮೊದಲಾದವರ ನೃತ್ಯವೂ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಬಿ.ಸಿ.ರೋಡಿನ ವೈಭವಿ ಆಡಿಯೋ ಸ್ಟುಡಿಯೋ ಆಡಿಯೋ ರೆಕಾರ್ಡಿಂಗ್, ಅವಿನಾಶ್ ಪೂಜಾರಿ ಅವರ ಸಂಕಲ, ವಿನಯ್ ಅವರ ಪೋಸ್ಟರ್ ಡಿಸೈನ್ ಕೂಡಾ ಈ ”ಪುರಲ್ದ ಸಿರಿಯೇ..’ ಯಶಸ್ಸಿನ ಹಿಂದಿದೆ ಎಂಬುದು ಗಮನಾರ್ಹ.