ಆಗಸ್ಟ್​ 15 ರಂದು ಪುಷ್ಪ 2: ದಿ ರೂಲ್’ ಆರಂಭ; ಅಂದೇ ‘ಸಿಂಗಮ್ ಅಗೈನ್’​

ಅಲ್ಲು ಅರ್ಜುನ್ ಅಭಿನಯದ ತೆಲುಗು ಭಾಷೆಯ ಆಕ್ಷನ್-ಡ್ರಾಮಾ ಜಾನರ್​, 2021 ರಲ್ಲಿ ಬಿಡುಗಡೆಯಾದ ‘ಪುಷ್ಪ: ದಿ ರೈಸ್’ ಚಿತ್ರದ ಮುಂದುವರಿದ ಭಾಗವಾದ ‘ಪುಷ್ಪ 2: ದಿ ರೂಲ್’ ಸಿನಿಮಾ ಆಗಸ್ಟ್​ 15, 2024 ರಂದು ಜಾಗತಿಕವಾಗಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಚಿತ್ರತಂಡ ಪೋಸ್ಟರ್​ ಜತೆಗೆ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ.

ಬಾಲಿವುಡ್​ ನಟ ಅಜಯ್​ ದೇವಗನ್​ ಅಭಿನಯದ ‘ಸಿಂಗಮ್ ಅಗೈನ್’​ ಚಿತ್ರವೂ ಅದೇ ದಿನ ಬಿಡುಗಡೆಗೊಳ್ಳಲಿದೆಯಂತೆ. ಇದಕ್ಕಾಗಿ ಚಿತ್ರತಂಡ ಭರ್ಜರಿ ತಯಾರಿಯಲ್ಲಿ ತೊಡಗಿದೆ.

Related posts