ಲೇಹ್: ಭಾರತ ವಿರುದ್ಧ ರಹಸ್ಯ ಸಮರ ಸಾರಿರುವ ಚೀನಾ ಲಡಾಕ್ ಗಡಿ ಭಾಗ, ಲೇಹ್ ಸುತ್ತಮುತ್ತ ಅತಿಕ್ರಮಣ ಯತ್ನ ನಡೆಸಿ ಭಾರತೀಯ ಯೋಧರ ಕೆಂಗಣ್ಣಿಗೆ ಗುರಿಯಾಗಿದೆ.
ಗುಲ್ವಾನ್ ಕಣಿವೆಯಲ್ಲಿ ಇತ್ತೀಚಿಗೆ ನಡೆದ ಸಂಘರ್ಷದಲ್ಲಿ 20 ಕ್ಕೂ ಹೆಚ್ಚು ಮಂದಿ ಭಾರತೀಯ ಯೋಧರು ಹುತಾತರಾಗಿದ್ದು ಆ ಘಟನೆ ನಂತರ ಭಾರತ ಸೇನೆ ಗಡಿ ಭಾಗದಲ್ಲಿ ಸರ್ವ ಸನ್ನದ್ಧವಾಗಿದೆ.
ಈ ನಡುವೆ ಭಾರತ-ಚೀನಾ ಗಡಿ ಭಾಗದ ಪ್ರದೇಶಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಭೇಟಿ ನೀಡಿದ್ದಾರೆ. ಲಡಾಕ್ ಮತ್ತು ಜಮ್ಮು-ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ಕೈಗೊಂಡಿರುವ ಅವರು ಸೇನಾ ಶಿಬಿರಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ದೇಶ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವ ಯೋಧರಿಗೆ ರಕ್ಷಣಾ ಸಚಿವರು ಧೈರ್ಯ ತುಂಬಿದರು. ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಎಂ ಎಂ ನಾರವಾನೆ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.