ಬೆಂಗಳೂರು- ನಾಡು-ನುಡಿ, ಸಾಹಿತ್ಯ, ರಂಗಭೂಮಿ, ಮಾಧ್ಯಮ, ಸಮಾಜಸೇವೆ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ 2020ನೇ ಸಾಲಿನ 65 ಸಾಧಕರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಜಿಲ್ಲೆಗಳಿಂದ ಒಟ್ಟು 1780 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ 130 ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗಿದ್ದು, ಇದರಲ್ಲಿ ನಾಡು, ನುಡಿ, ಕೃಷಿ, ಕ್ರೀಡೆ, ಚಲನಚಿತ್ರ, ಯಕ್ಷಗಾನ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 65 ಸಾಧಕರನ್ನು ಮಾತ್ರ ಅಂತಿಮಗೊಳಿಸಲಾಗಿದೆ ಎಂದು ವಿವರಿಸಿದರು.
ಕೃಷಿ-3 , ಕ್ರೀಡೆ-2, ಚಲನಚಿತ್ರ-2, ಚಿತ್ರಕಲೆ-1, ಜನಪದ -3, ನ್ಯಾಯಾಂಗ-2, ನೃತ್ಯ -1, ಪರಿಸರ-2, ಬಯಲಾಟ-2, ಮಾಧ್ಯಮ-2, ಯಕ್ಷಗಾನ-2, ಯೋಗ-1, ರಂಗಭೂಮಿ-3, ವಿಜ್ಞಾನ-ತಂತ್ರಜ್ನಾನ-2, ವೈದ್ಯಕೀಯ-4, ಶಿಕ್ಷಣ -6, ಶಿಲ್ಪಕಲೆ-1, ಸಂಕೀರ್ಣ- 4, ಸಂಗೀತ -5, ಸಂಘ-ಸಂಸ್ಥೆ-5, ಸಮಾಜ ಸೇವೆ-4, ಸಹಕಾರ-1, ಸಾಹಿತ್ಯ-5, ಹೊರನಾಡ ಕನ್ನಡಿಗ -2, ವಿಶೇಷ ಚೇತನ -2 ಸೇರಿದಂತೆ ಒಟ್ಟು 65 ಮಂದಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರ ವಿವರ:
ಸಾಹಿತ್ಯ ಕ್ಷೇತ್ರ: ಧಾರವಾಡ ಜಿಲ್ಲೆಯ ಪ್ರೊ.ಸಿ.ಪಿ.ಸಿದ್ದಾಶ್ರಮ, ಕೋಲಾರ ಜಿಲ್ಲೆಯ ವಿ.ಮುನಿವೆಂಕಟಪ್ಪ, ಗದಗ ಜಿಲ್ಲೆಯ ರಾಮಣ್ಣ ಬ್ಯಾಟಿ (ವಿಶೇಷ ಚೇತನ), ದಕ್ಷಿಣ ಕನ್ನಡ ಜಿಲ್ಲೆಯ ವಲೇರಿಯನ್ ಡಿಸೋಜ (ವಲ್ಲಿವಗ್ಗ), ಯದಗಿರಿ ಜಿಲ್ಲೆಯ ಡಿ.ಎನ್.ಅಕ್ಕಿ.
ಸಂಗೀತ ಕ್ಷೇತ್ರ: ರಾಯಚೂರು ಜಿಲ್ಲೆಯ ಅಂಬಯ್ಯ ನೂಲಿ, ಬೆಳಗಾವಿ ಜಿಲ್ಲೆಯ ಅನಂತ ತೇರದಾಳ, ಬೆಂಗಳೂರು ನಗರದ ಬಿ.ವಿ.ಶ್ರೀನಿವಾಸ್, ಗಿರಿಜನ ನಾರಾಯಣ, ದಕ್ಷಿಣ ಕನ್ನಡದ ಕೆ.ಲಿಂಗಪ್ಪ ಶರಿಗಾರ ಕಟೀಲು.
ನ್ಯಾಯಾಂಗ : ಬೆಂಗಳೂರಿನ ಕೆ.ಎನ್.ಭಟ್, ಉಡುಪಿಯ ಎಂ.ಕೆ.ವಿಜಯಕುಮಾರ್.
ಮಾಧ್ಯಮ: ಮೈಸೂರಿನ ಸಿ.ಮಹೇಶ್ವರನ್, ಬೆಂಗಳೂರಿನ ಟಿ.ವೆಂಕಟೇಶ್ ( ಈ ಸಂಜೆ ಪತ್ರಿಕೆಯ ಸಂಪಾದಕರು).
ಯೋಗ- ಮೈಸೂರಿನ ಡಾ.ಎ.ಎಸ್.ಚಂದ್ರಶೇಖರ್.
ಶಿಕ್ಷಣ: ಚಿಕ್ಕಮಗಳೂರು ಜಿಲ್ಲೆಯ ಎಂ.ಎನ್.ಷಡಕ್ಷರಿ, ಚಾಮರಾಜನಗರದ ಡಾ.ಆರ್.ರಾಮಕೃಷ್ಣ, ದಾವಣಗೆರೆಯ ಡಾ.ಎಂ.ಜಿ.ಈಶ್ವರಪ್ಪ, ಬೆಳಗಾವಿಯ ಅಶೋಕ್ ಶೆಟ್ಟರ್, ಗದಗ ಜಿಲ್ಲೆಯ ಡಿ.ಎಸ್.ದಂಡಿಗನ್
ಹೊರನಾಡು ಕನ್ನಡಿಗ – ದಕ್ಷಿಣ ಕನ್ನಡ ಜಿಲ್ಲೆ ಮೂಲದ ಕುಸುಮೋದರದೇರಣ್ಣ ಶೆಟ್ಟಿ ಕೇಲ್ತಡ್ಕ, ಮಹಾರಾಷ್ಟ್ರ ರಾಜ್ಯದ ಮುಂಬೈನ ಮುಲುಂಡದ ವಿದ್ಯಾ ಸಿಂಹಾಚಾರ್ಯ ಮಾಹುಲಿ.
ಕ್ರೀಡೆ: ತುಮಕೂರು ಜಿಲ್ಲೆಯ ಎಚ್.ಬಿ.ನಂಜೇಗೌಡ, ಬೆಂಗಳೂರು ನಗರದ ಉಷಾರಾಣಿ.
ಸಂಕೀರ್ಣ: ಕೋಲಾರ ಜಿಲ್ಲೆಯ ಡಾ.ಕೆ.ವಿ.ರಾಜು, ಹಾಸನದ ನಂ.ವೆಂಕೋಬರಾವ್, ಮಂಡ್ಯದ ಡಾ.ಕೆ.ಎಸ್.ರಾಜಣ್ಣ (ವಿಶೇಷ ಚೇತನ) ಹಾಗೂ ಮಂಡ್ಯದ ವಿ.ಲಕ್ಷ್ಮೀನಾರಾಯಣ (ನಿರ್ಮಾಣ್).
ಸಂಘ-ಸಂಸ್ಥೆ: ಬೆಂಗಳೂರು ನಗರದ ಯೂತ್ ಫಾರ್ ಸೇವಾ ಹಾಗೂ ಬೆಟರ್ ಇಂಡಿಯಾ, ಬಳ್ಳಾರಿಯ ದೇವದಾಸಿ ಸ್ವಾವಲಂಬನ ಕೇಂದ್ರ, ಬೆಂಗಳೂರ ಗ್ರಾಮಾಂತರ ಜಿಲ್ಲೆಯ ಯುವ ಬ್ರಿಗೇಡ್, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಧರ್ಮೋತ್ತಾನ ಟ್ರಸ್ಟ್.
ಸಮಾಜ ಸೇವೆ: ಉತ್ತರ ಕನ್ನಡ ಜಿಲ್ಲೆಯ ಎನ್.ಎಸ್.(ಕುಂದರಗಿ)ಹೆಗಡೆ, ಚಿಕ್ಕಮಗಳೂರಿನ ಪ್ರೇಮಾ ಕೋದಂಡರಾಮ ಶ್ರೇಷ್ಠಿ ಹಾಗೂ ಮೋಹಿನಿ ಸಿದ್ದೇಗೌಡ, ಉಡುಪಿಯ ಮಣೆಗಾರ್ ಮೀರಾನ್ ಸಾಹೇಬ್.
ವೈದ್ಯಕೀಯ ಕ್ಷೇತ್ರ: ಬಾಗಲಕೋಟೆ ಜಿಲ್ಲೆಯ ಡಾ.ಅಶೋಕ್ ಸೊನ್ನದ್, ಶಿವಮೊಗ್ಗದ ಡಾ.ಬಿ.ಎಸ್.ಶ್ರೀನಾಥ್, ಬಳ್ಳಾರಿಯ ಡಾ.ಎ.ನಾಗರಾತ್ನ, ರಾಮನಗರದ ಡಾ.ವೆಂಕಟಪ್ಪ.
ಕೃಷಿ: ಬೀದರ್ ಜಿಲ್ಲೆಯ ಸುರತ್ ಸಿಂಗ್ ಕನೂರ್ ಸಿಂಗ್ ರಜಪುತ್, ಚಿತ್ರದುರ್ಗದ ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ, ಕಲಬುರಗಿಯ ಡಾ.ಸಿದ್ದರಾಮಪ್ಪ ಬಸವಂತರಾವ್ ಪಾಟೀಲ್.
ಪರಿಸರ ಕ್ಷೇತ್ರ: ಚಿಕ್ಕಬಳ್ಳಾಪುರ ಜಿಲ್ಲೆಯ ಅರಮನಾರಾಯಣ, ವಿಜಯಪುರದ ಎನ್.ಡಿ.ಪಾಟೀಲ್.
ವಿಜ್ಞಾನ-ತಂತ್ರಜ್ಞಾನ: ಉಡುಪಿ ಜಿಲ್ಲೆಯ ಉಡುಪಿ ಶ್ರೀನಿವಾಸ, ಶಿವಮೊಗ್ಗದ ಚಿಂದಿ ವಾಸುದೇವಪ್ಪ.
ಸಹಕಾರ: ಡಾ.ಸಿ.ಎನ್.ಮಂಜೇಗೌಡ
ಬಯಲಾಟ: ಬೆಳಗಾವಿ ಜಿಲ್ಲೆಯ ಕೆಂಪವ್ವ ಹರಿಜನ, ಹಾವೇರಿಯ ಚೆನ್ನಬಸಪ್ಪ ಬೆಂಡಿಗೇರಿ.
ಯಕ್ಷಗಾನ: ಚಾಮರಾಜನಗರ ಜಿಲ್ಲೆಯ ಬಂಗಾರ್ ಆಚಾರಿ, ಶಿವಮೊಗ್ಗದ ಎಂ.ಕೆ.ರಮೇಶ್ ಆಚಾರ್ಯ.
ರಂಗಭೂಮಿ: ಹಾಸನದ ಅನಸೂಯಮ್ಮ, ದಾವಣಗೆರೆಯ ಎಚ್.ಷಡಕ್ಷರಪ್ಪ, ಚಿತ್ರದುರ್ಗದ ತಿಪ್ಪೇಸ್ವಾಮಿ.
ಚಲನಚಿತ್ರ: ತುಮಕೂರು ಜಿಲ್ಲೆಯ ಬಿ.ಎಸ್.ಬಸವರಾಜು, ಕೊಡಗಿನ ಅಪಾಢಾಂಡ ತಿಮ್ಮಯ್ಯ ರಘು (ಎ.ಟಿ.ರಘು).
ಚಿತ್ರಕಲೆ : ಧಾರವಾಡ ಜಿಲ್ಲೆಯ ಎಂ.ಜೆ.ವಾಚೇದ್ ಮಠ
ಜನಪದ: ಬಾಗಲಕೋಟೆಯ ಗುರುರಾಜ್ ಹೊಸಕೋಟೆ, ಹಾಸನದ ಡಾ.ಹಂಪನಹಳ್ಳಿ ತಿಮ್ಮೇಗೌಡ.
ಶಿಲ್ಪಕಲೆ: ಮೈಸೂರಿನ ಎನ್.ಎಸ್.ಜನಾರ್ಧನಮೂರ್ತಿ.
ನೃತ್ಯ- ನಾಟ್ಯ: ವಿಧೂಷಿ ಜ್ಯೋತಿ ಪಟ್ಟಾಭಿರಾಮ್.
ಜನಪದ/ ತೊಗಲು ಗೊಂಬೆಯಾಟ: ಕೊಪ್ಪಳದ ಕೇಶಪ್ಪ ಶಿಳ್ಳೆಕ್ಯಾತರ