ರಾಮಮಂದಿರ ಶಿಲಾನ್ಯಾಸ; ಶ್ರೀ ಕ್ಷೇತ್ರ ಪೊಳಲಿಯಲ್ಲಿ ಕೈಂಕರ್ಯ

ಮಂಗಳೂರು: ಬಹುತೇಕ ಹಿಂದೂ ಸಂಘಟನೆಗಳ ಪ್ರಮುಖರೂ ಕೊರೋನಾ ಸಂಕಟದಿಂದಾಗಿ ಅಯೋಧ್ಯೆಯ ಸಮಾರಂಭದಲ್ಲಿ ಭಾಗಿಯಾಗಿಲ್ಲ. ಬದಲಾಗಿ ತಮ್ಮ ಊರುಗಳಲ್ಲೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ವಿಶೇಷ ಕೈಂಕರ್ಯ ನೆರವೇರಿಸಲಾಯಿತು.

ಪೊಳಲಿ ಕ್ಷೇತ್ರದಲ್ಲಿ ಅಮ್ಮನವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರಾರ್ಥನೆ ನೆರವೇರಿತು. ಬಿಜೆಪಿ ನಾಯಕರಾದ ದೇವಪ್ಪ ಪೂಜಾರಿ, ವೆಂಕಟೇಶ್ ನಾವಡ, ತಾ.ಪಂ ಸದಸ್ಯ ಯಶವಂತ ಪೊಳಲಿ, ಯುವ ಮೋರ್ಚಾದ ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಅಶ್ವಥ್, ಕಾರ್ತಿಕ್ ಬಳ್ಳಾಲ್, ಕಿಶೋರ್ ಪಲ್ಲಿಪ್ಪಾಡಿ, ಲೋಕೇಶ್ ಭರಣಿ, ನಂದರಾಮ್ ರೈ, ಸುಕೇಶ್ ಚೌಟ, ವಾಮನ ಆಚಾರ್ಯ ಮೊದಲಾದವರು ಈ ಕೈಂಕರ್ಯದಲ್ಲಿ ಭಾಗವಹಿಸಿದ್ದರು.

ಇನ್ನೊಂದೆಡೆ, ಮಂಗಳೂರಿನ ಬೆಳ್ಳೂರಿನಲ್ಲಿ ಹಿಂದೂ ಕಾರ್ಯಕರ್ತರು ವೆಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ ಅಯೋಧ್ಯೆಯಲ್ಲಿನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇದನ್ನೂ ಓದಿ.. ರಾಮ ಮಂದಿರಕ್ಕಾಗಿ ಹೋರಾಟ; ಸಾರಥ್ಯ ವಹಿಸಿದ್ದ ಡಾ.ಪ್ರಭಾಕರ ಭಟ್’ಗೆ ಗೌರವ 

 

Related posts