ರಾಮ ಮಂದಿರಕ್ಕಾಗಿ ಹೋರಾಟ; ಸಾರಥ್ಯ ವಹಿಸಿದ್ದ ಡಾ.ಪ್ರಭಾಕರ ಭಟ್’ಗೆ ಗೌರವ

ಮಂಗಳೂರು : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ಈಡೇರಿದೆ. ರಾಮ ಜನ್ಮಭೂಮಿಯ್ಲಲಿ ಶಿಲಾನ್ಯಾಸ ನೆರವೇರಿದರೆ ಅದಕ್ಕೆ ಪೂರಕವಾಗಿ ನಾಡಿನ ವಿವಿಧೆಡೆ ಧಾರ್ಮಿಕ ಕೈಂಕರ್ಯಗಳು ಗಮನಸೆಳೆದವು. ರಾಮ ಮಂದಿರ ಹೋರಾಟದಲ್ಲಿ ಪಾಲ್ಗೊಂಡವರನ್ನು ನೆನಪಿಸುವ ಸನ್ನಿವೇಶಗಳೂ ಗಮನ ಸೆಳೆದವು.

ಈ ನಡುವೆ ರಾಮ ಮಂದಿರಕ್ಕಾಗಿ ನಡೆದ ಹೋರಾಟದಲ್ಲಿ ಸುದೀರ್ಘ ಕಾಲ ಭಾಗಿಯಾಗಿ ಕರಸೇವಕರು ಹಾಗೂ ಹಿಂದೂ ಕಾರ್ಯಕರ್ತರಿಗೆ ಸ್ಪೂರ್ತಿಯಾಗಿರುವ ಆರೆಸ್ಸೆಸ್ ರಾಷ್ಟ್ರೀಯ ಪ್ರಮುಖ್ ಡಾ.ಪ್ರಭಾಕರ್ ಭಟ್ ಅವರ ಸೇವೆಯನ್ನು ಸ್ಮರಿಸುವ ಪ್ರಯತ್ನ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಅವರು ಡಾ.ಪ್ರಭಾಕರ್ ಭಟ್ ಅವರನ್ನು ಭೇಟಿಯಾಗಿ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು. ಬಿಜೆಪಿ ನಾಯಕ ರಮಾನಾಥ್ ರಾಯಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ, 1990-1992 ರ ಅಯೋಧ್ಯೆ ಕರಸೇವೆಗೆ ಭಾಗವಹಿಸಿದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಅಡ್ಯಾರ್ ಶ್ರೀ ಮಹಾಬಲ ಅಡ್ಯಾರ್ ಶ್ರೀ ರವೀಂದ್ರ ಶೆಟ್ಟಿಗಾರ್ ಅವರಿಗೆ ಅಡ್ಯಾರ್ ಶ್ರೀ ವೀರಾಂಜನೇಯ ಮಂದಿರದ ಸಮಿತಿ ಹಾಗೂ ಸದಸ್ಯರ ವತಿಯಿಂದ ಅಭಿನಂದಿಸಿದಲಾಯಿತು.

ಇದನ್ನೂ ಓದಿ.. ರಾಮಮಂದಿರ ಶಿಲಾನ್ಯಾಸ; ಶ್ರೀ ಕ್ಷೇತ್ರ ಪೊಳಲಿಯಲ್ಲಿ ಕೈಂಕರ್ಯ

 

Related posts