ಬೆಂಗಳೂರು: ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇವಿ ಪವರ್‌ಪ್ಲಸ್ ವಾಹನದ ಮುಂಭಾಗದಲ್ಲಿ ಚಲಿಸುತ್ತಿದ್ದ ಬೊಲೋರೋ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ.
ಬೊಲೆರೋ ಲಗೇಜ್ ವಾಹನವು ಒಳಗೆ ಮತ್ತು ಟಾಪ್ ಮೇಲೆ plywood sheetಗಳನ್ನು overload ಮಾಡಿ ತುಂಬಿಕೊಂಡು ಹೋಗುತ್ತಿದ್ದು, ಹಠಾತ್ತನೆ ಬೊಲೊರೋ ವಾಹನದ ಟೈರ್ ಬಸ್ಟ್ ಅಗಿ ಅದರಲ್ಲಿನ ಫ್ಲೈವುಟ್ ಕೆಎಸ್ಸಾರ್ಟಿಸಿ ಬಸ್ಸಿನ ಮುಂಭಾಗದ ಗಾಜನ್ನು ಹೊಕ್ಕಿದೆ. ಈ ಅಪಘಾತದಲ್ಲಿ ಬಸ್ಸಿನ ಚಾಲಕನ ಎದೆಗೆ ಗಾಯವಾಗಿ, ಬಸ್ ಸಂಪೂರ್ಣ ನಿಯಂತ್ತಣ ಕಳೆದುಕೊಂಡು ಡಿವೈಡರ್ ದಾಟಿ ಸರ್ವೀಸ್ ರಸ್ತೆಗೆ ನುಗ್ಗಿದೆ. ಈ ಅವಘಡದಲ್ಲಿ ಬಸ್ ಚಾಲಕ ರಮೇಶ್ ಎಂಬವರು ಸಾವನ್ನಪ್ಪದ್ದು, 22 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಗಾಯಳುಗಳನ್ನು ರಾಮನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದು ಕೆಎಸ್ಸಾರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು, ಮುಖ್ಯ ಭದ್ರತಾ ಮತ್ತು ಜಾಗೃತಧಿಕಾರಿ, ರಾಮನಗರ ವಿಭಾಗೀಯ ನಿಯಂತ್ರಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಿದ್ದಾರೆ ಆಸ್ಪತ್ರೆಯಲ್ಲಿರುವ ಪ್ರಯಾಣಿಕರ ವೈದ್ಯಕೀಯ ಚಿಕಿತ್ಸಾ ವೆಚ್ಛವನ್ನು ನಿಗಮವು ಭರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.