ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಸೇವಾವಧಿ ಇಂದು ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಹೃದಯ ಸ್ಪರ್ಶಿ ಬೀಳ್ಕೂಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಯೋಧ್ಯೆ ವಿವಾದ, ಶಬರಿಮಲೆ ಸೇರಿದಂತೆ ಪ್ರಮುಖ ಪ್ರಕರಣಗಳ ತೀರ್ಪು ನೀಡಿ ಜಗತ್ತಿನ ಗಮನಸೆಳೆದವರು ನ್ಯಾಯಮೂರ್ತಿ ರಂಜನ್ ಗೊಗೊಯ್.
ಶುಕ್ರವಾರ ನಡೆದ ಬೀಳ್ಕೂಡುಗೆ ಕಾರ್ಯಕ್ರ ಮದಲ್ಲಿ ಹಿರಿಯ ನ್ಯಾಯಮೂರ್ತಿಗಳು, ಹಿರಿಯ ಅಧಿಕಾರಿಗಳು, ನೂರಾರು ವಕೀಲರು ಪಾಲ್ಗೊಂಡಿದ್ದರು. ರಂಜನ್ ಗೊಗೊಯ್ ಅವರೊಂದಿನ ಒಡನಾಟದ ಬಗ್ಗೆ ಈ ಪ್ರಮುಖರು ಅನಿಸಿಕೆ ಹಂಚಿಕೊಡರು.
ಈ ವೇಳೆ ಮಾತನಾಡಿದ ಗಣ್ಯರು ಶಬರಿಮಲೆ, ಆರ್ ಟಿಐ, ರಫೇಲ್ ಸೇರಿದಂತೆ ಹಲವು ಪ್ರಕರಣಗಳ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ರಂಜನ್ ಗೊಗೊಯ್ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ನ್ಯಾಯಮೂರ್ತಿ ರಂಜನ್ ಗೊಗೊಯ್ ನಿವೃತ್ತಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಇನ್ನು ಮುಂದೆ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಮುಂದುವರಿಯಲಿದ್ದಾರೆ.