ರಿವರ್ಸ್ ಆಪರೇಷನ್? ಕಾಂಗ್ರೆಸ್’ಗೆ ಆಟ, ಬಿಜೆಪಿಗೆ ಪ್ರಾಣಸಂಕಟ..!

ಬೆಂಗಳೂರು: ಲೋಕಸಭಾ ಚುನಾವಣಾ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯ ಪಕ್ಷಗಳಲ್ಲೂ ವಿದ್ಯಮಾನಗಳು ಗರಿಗೆದರಿವೆ. ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು, ಇದಕ್ಕೆ ಪೂರಕವಾಗಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎದುರಾಳಿ ಪಕ್ಷಗಳಿಗೆ ನೀಡಿರುವ ಆಹ್ವಾನ ಕುತೂಹಲಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ.

ವಲಸಿಗರ ಅವಾಂತರದಿಂದಾಗಿ ರಾಜ್ಯ ಬಿಜೆಪಿಯಲ್ಲಿ ಬಿನ್ನಾಭಿಪ್ರಾಯ ಸನ್ನಿವೇಶ ಕಂಡುಬರುತ್ತಿದೆ ಎಂಬ ಮಾತುಗಳೂ ಹರಿದಾಡುತ್ತಿವೆ. ಜೊತೆಗೆ ಪ್ರತಿಪಕ್ಷ ನಾಯಕರ ಸ್ಥಾನ, ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಾಯಕರು, ಅವರ ಬೆಂಬಲಿಗರು ಕಾಂಗ್ರೆಸ್ ನಾಯಕತ್ವವನ್ನು ಕೊಂಡಾಡುತ್ತಿರುವ ಅಚ್ಚರಿಯ ಸನ್ನಿವೇಶಗಳೂ ಕಮಲ ನಾಯಕನ್ನು ತಬ್ಬಿಬ್ಬು ಮಾಡಿದೆ.

ರಿವರ್ಸ್ ಆಪರೇಷನ್..?

ಈ ನಡುವೆ ಆಪರೇಷನ್ ಕಮಲ ಮೂಲಕ ಈ ಹಿಂದೆ ಬಿಜೆಪಿ ಸೇರಿದ್ದ ಕೆಲವು ನಾಯಕರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳೂ ಪ್ರತಿಧ್ವನಿಸುತ್ತಿವೆ. ಸೋಮಣ್ಣ, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್ ಸಹಿತ ಅನೇಕ ನಾಯಕರು ಆಪರೇಷನ್ ಕಮಲ ಮೂಲಕ ಬಿಜೆಪಿ ಗರಡಿ ಸೇರಿದವರು. ಆದರೆ ಇದೀಗ ಅವರ ಬೆಂಬಲಿಗರು ಕಾಂಗ್ರೆಸ್ ಸೇರುವಂತೆ ನಾಯಕರ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ.

ಆದರೆ, ಈ ಬೆಳವಣಿಗೆಯನ್ನು ಅಲ್ಲಗಳೆದಿರುವ ಬಿಜೆಪಿ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ತಮ್ಮ ಪಕ್ಷದ ಯಾವ ಶಾಸಕರೂ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದಿದ್ದಾರೆ. ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿರುವ ಅವರು, ಕೆಲವು ಶಾಸಕರು ಕಾಂಗ್ರೆಸ್ಸಿಗೆ ಬರ್ತಾರೆ ಎಂಬುದಾಗಿ ಆ ಪಕ್ಷದವರು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್​ನಲ್ಲೇ ಇರುವ 30ಕ್ಕೂ ಹೆಚ್ಚು ಶಾಸಕರಿಗೆ ಅಲ್ಲಿಯೇ ಅನುಕೂಲ ಆಗ್ತಿಲ್ಲ. ಈ ಬಗ್ಗೆ ಸಿಂಗೆ ಪತ್ರ ಬರೆದಿದ್ದಾರೆ. ಹೀಗಿರುವಾಗ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಿತ್ತಾರೆಯೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೆಲ್ಲದರ ನಡುವೆ ಸಿದ್ದರಾಮಯ್ಯ ಆಡಳಿತದ ಬಗ್ಗೆ ಕಾಂಗ್ರೆಸ್ ಶಾಸಕರೇ ಅಸಮಾಧಾನಗೊಂಡಿದ್ದು ಈ ನಾಯಕರನ್ನು ಸಂಪರ್ಕಿಸುವ ಪ್ರಯತ್ನ ಬಿಜೆಪಿ ಕಡೆಯಿಂದ ನಡೆದಿದೆ ಎಂಬ ಚರ್ಚೆಯೂ ಸಾಗಿದೆ.

Related posts