ಸೀಮಂತ್ ಕುಮಾರ್’ಗೆ ಎಸಿಬಿ ಸಾರಥ್ಯ; ಮಂಗಳೂರು ಕಮಿಷನರ್ ಆಗಿ ಶಶಿಕುಮಾರ್

ಬೆಂಗಳೂರು: ಹೊಸ ವರ್ಷದ ಸಂಭ್ರಮದ ನಡುವೆಯೇ ಸೀಮಂತ್ ಕುಮಾರ್ ಸಿಂಗ್ ಸಹಿತ ಹಲವು ಮಂದಿ ಹಿರಿಯ ಅಧಿಕಾರಿಗಳು ನೂತನ ವರ್ಷಾರಂಭದಲ್ಲಿ ಭಡ್ತಿ ಹೊಂದಿದ್ದಾರೆ. ಹೆಚ್ಚುವರಿ ಪೊಲೀಸ್ ನಿರ್ದೇಶಕರಾಗಿ ಮುಂಬಡ್ತಿಯಾಗಿರುವ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳದ ಸಾರಥ್ಯವನ್ನು ಸರ್ಕಾರ ವಹಿಸಿದೆ.

ಈ ವರೆಗೂ ಕೇಂದ್ರ ವಲಯ ಪೊಲೀಸ್ ಮಹಾ ನಿರೀಕ್ಷಕರಾಗಿದ್ದ ಸೀಮಂತ್ ಕುಮಾರ್ ಸಿಂಗ್ ವರು, ಬೆಂಗಳೂರು ಹೊರವಲಯದಲ್ಲಿರುವ ಟೊಯೋಟಾ ಕಾರ್ಮಿಕ ಬಿಕ್ಕಟ್ಟು, ವಿಸ್ಟ್ರಾನ್ ಸಂಸ್ಥೆಯ ವಿವಾದ, ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣಗಳ ಕಗ್ಗಂಟು ಸಂದರ್ಭಗಳಲ್ಲಿ ಕೈಗೊಂಡ ನಿಷ್ಟುರ ಕ್ರಮಗಳಿಂದಾಗಿ ದೇಶದ ಗಮನ ಸೆಳೆದಿದ್ದಾರೆ. ಇದೀಗ ಅವರು ಎಡಿಜಿಪಿಯಾಗಿ ಮುಂಬಡ್ತಿಯಾಗುತ್ತಿದ್ದಂತೆಯೇ ಎಸಿಬಿಯ ಮುಖ್ಯಸ್ಥ ಹುದ್ದೆ ಸಿಕ್ಕಿದೆ.

ಇದೇ ವೇಳೆ ಹಿರಿಯ ಐಪಿಎಸ್ ಅಧಿಕಾರಿ ಏನ್.ಶಶಿ ಕುಮಾರ್ ಅವರಿಗೂ ಸರ್ಕಾರ ಪ್ರಮೋಷನ್ ಗಿಫ್ಟ್ ನೀಡಿದೆ. ಉಪ ಪೊಲೀಸ್ ಮಹಾ ನಿರೀಕ್ಷಕ ಹುದ್ದೆಗೆ ಭಡ್ತಿ ಪಡೆದಿರುವ ಶಶಿಕುಮಾರ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರನ್ನಾಗಿ ಸರ್ಕಾರ ನೇಮಕ ಮಾಡಿದೆ. ಬೆಂಗಳೂರು ಉತ್ತರ ವಿಭಾಗಡಾ ಡಿಸಿಪಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಸಾಮರ್ಥ್ಯವಾಗಿ ಪೊಲೀಸ್ ಇಲಾಖೆಯನ್ನು ಮುನ್ನಡೆಸಿದ್ದ ಶಶಿಕುಮಾರ್ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಜನಸ್ನೇಹಿ ಎಸ್ಪಿ ಎಂದೇ ಗುರುತಾಗಿದ್ದರು. ಇದೀಗ ಇವರು ಡಿಐಜಿಯಾಗಿ ಮಂಗಳೂರು ಕಮಿಷನರೇಟ್’ನ ಸಾರಥ್ಯ ವಹಿಸಲಿದ್ದಾರೆ.

Related posts