ಬೆಳ್ಳಂಬೆಳಗ್ಗೆಯೇ ಭೀಕರ ದುರಂತದ ಸುದ್ದಿ ಕೇಳಿ ಇಡೀ ಕರುನಾಡು ಬೆಚ್ಸಿ ಬಿದ್ದಿದೆ. ಶಿವಮೊಗ್ಗ ಜಿಲೀಯಾದ್ಯಂತ ಬುಧವಾರ ರಾತ್ರಿ ಭಾರೀ ಸ್ಫೋಟದೊಂದಿಗೆ ಭೂಕಂಪನದ ಅನುಭವವಾಗಿತ್ತು. ಭೂಕಂಪ ಸಂಭವಿಸಿದೆ ಎಂದೇ ಜನ ಭಯಭೀತರಾಗಿದ್ದರು. ಆದರೆ ಆ ಹೊತ್ತಿಗೆ ಶಿವಮೊಗ್ಗ ಸಮೀಪದ ಅಬ್ಬಲಗೆರೆ- ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್ ಬಳಿ ಸ್ಫೋಟಕ ಸಿಡಿದು ಭಾರೀ ಅನಾಹುತ ಸಂಭವಿಸಿದೆ. ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಡೈನಾಮೆಟ್ ಸ್ಪೋಟಿಸಿದ ಪರಿಣಾಮ ಬಿಹಾರ ಮೂಲದ 15 ಕಾರ್ಮಿಕರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತಂದಿದ್ದ 50 ಡೈನಾಮೆಟ್ ಬಾಕ್ಸ್ ಗಳನ್ನು ಒಂದೆಡೆ ಇಡಲಾಗಿತ್ತು. ಈ ಫೋಟಕಗಳು ಸಿಡಿದು 15 ಮಂದಿ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಭೂಮಿ ಕಂಪಿಸಿದ ಅನುಭವವಾದ ಸಮಯದಲ್ಲೇ ಈ ಘಟನೆ ನಡೆದಿದೆ. ಈ ಸ್ಪೋಟದಿಂದಲೇ ಭೂಕಂಪನದ ಅನುಭವವಾಗಿರಬಹುದೆಂದು ಹೇಳಲಾಗುತ್ತಿದೆ.