ಅಮೆರಿಕದಲ್ಲಿ ಗುಂಡಿನ ದಾಳಿ 22 ಮಂದಿ ಸಾವು

ಅಮೆರಿಕದಲ್ಲಿ ಲೆವಿಸ್ಟೋನ್ ಪ್ರಾಂತ್ಯದ ಮೈನೆ ಪಟ್ಟಣದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು 22 ಮಂದಿ ಸಾವನ್ನಪ್ಪಿದ್ದಾರೆ. 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.

ಲೆವಿಸ್ಟನ್​ನಲ್ಲಿರುವ ಸೆಂಟ್ರಲ್ ಮೈನೆ ಮೆಡಿಕಲ್ ಸೆಂಟರ್​ನಲ್ಲಿ ಈ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭೀಕರ ದಾಳಿ ಅಮೆರಿಕಾವನ್ನು ಆತಂಕಕ್ಕೀಡು ಮಾಡಿದ್ದು ಕೃತ್ಯ ನಡೆಸಿದವರಿಗಾಗಿ ತನಿಖಾ ಸಂಸ್ಥೆಗಳು ಹುಡುಕಾಟ ನಡೆಸಿದೆ.

ಈ ದಾಳಿ ಕುರಿತಂತೆ, ಆಂಡ್ರೊಸ್ಕೋಗ್ಗಿನ್ ಕೌಂಟಿ ಶೆರಿಫ್ ಕಚೇರಿ ಶಂಕಿತನ ಎರಡು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ.

Related posts