ಸಿಕ್ಕಿಂನಲ್ಲಿ ಮೇಘಸ್ಫೋಟ; 19 ಮಂದಿ ಸಾವು, ನೂರಕ್ಕೂ ಹೆಚ್ಚು ಮಂದಿ ಕಾಣೆ

ಗ್ಯಾಂಗ್ಟಕ್: ಈಶಾನ್ಯ ಭಾರತದಲ್ಲಿ ಮಳೆ ಅವಾಂತರ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಿಕ್ಕಿಂ ರಾಜ್ಯದ ಹಲವು ಜಿಲ್ಲೆಗಳೂ ತತ್ತರಗೊಂಡಿದ್ದು ಪ್ರವಾಹಕ್ಕೆ ಈ ವರೆಗೆ 19 ಮಂದಿ ಬಲಿಯಾಗಿದ್ದಾರೆ.

ಸಿಕ್ಕಿಂನ ಉತ್ತರ ಭಾಗದ ಜಿಲ್ಲೆಗಳಲ್ಲಿರುವ ಲ್ಹೋನಕ್ ಸರೋವರದ ಬಳಿ ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಸಿಂಗ್ಟಾಮ್, ಬುರ್ದಾಂಗ್‌, ಲಾಚೆನ್, ಲಾಚುಂಗ್ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಮಂದಿ ಪ್ರವಾಸಿಗರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಭಾರೀ ಸಾವು ನೋವಿಗೆ ಕಾರಣವಾದ ಈ ಪ್ರವಾಹದಲ್ಲಿ 100ಕ್ಕೂ ಹೆಚ್ಚು ಮಂದಿ ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದ ಹೊಡೆತಕ್ಕೆ ಸಿಲುಕಿ ಹಾಲು ಸೈನಿಕರೂ ನಾಪತ್ತೆಯಾಗಿದ್ದಾರೆ. ಸುಮಾರು 22 ಸೈನಿಕರು ನಾಪತ್ತೆಯಾಗಿರುವ ಶಂಕೆ ಇದ್ದು ಅವರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಹಲವರನ್ನು ರಕ್ಷಿಸಲಾಗಿದ್ದು ಆ ವೇಳೆ ಗಾಯಗೊಂಡಿರುವ 26 ಮಂದಿಯನ್ನು ಸಿಕ್ಕಿಂನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Related posts