ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಕಾಫಿ ತವರು ಚಿಕ್ಕಮಗಳೂರಿನ ವಿದ್ಯಾರ್ಥಿನಿ ಕುಮಾರಿ ತನ್ಮಯ 625 ಅಂಕ ಪಡೆದು ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಚಿಕ್ಕಮಗಳೂರು ನಗರದ ಸಂತ ಜೋಸೆಫ್ ಪ್ರೌಢಶಾಲೆ ವಿದ್ಯಾರ್ಥಿನಿ ಕುಮಾರಿ ತನ್ಮಯ, ಇಂದಾವರ ನಿವಾಸಿ ಉಪತಹಶೀಲ್ದಾರ್ ಪ್ರಸನ್ನ ಹಾಗೂ ಶಿಕ್ಷಕಿ ಸಂಧ್ಯಾ ಅವರ ಪುತ್ರಿ.
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದಂತೆಯೇ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ಕುಮಾರಿ ತನ್ಮಯ ನಿವಾಸಕ್ಕೆ ತೆರಳಿ ಅಮ್ಮಾನಿಸಿ, ಅಭಿನಂದನೆ ಸಲ್ಲಿಸಿದರು.