ರಾಜ್ಯದಲ್ಲಿ ಮತ್ತೆ 11 ಹೊಸ ಕೊರೋನಾ ಕೇಸ್; ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆ

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಾಲೇ ಇವೆ. ಬೆಂಗಳೂರು, ಮೈಸೂರಿನಲ್ಲಿ ಸೋಂಕಿತರ ಪಟ್ಟಿ ಬೆಳೆಯುತ್ತಲೇ ಇದ್ದು ನಾಗರಿಕರಲ್ಲಿ ಆತಂಕ ಹೆಚ್ಚಾಗಿದೆ.

 

ಬೆಂಗಳೂರು: ಕೊರೋನಾ ಅಟ್ಟಹಾಸ ನಿಯಂತ್ರಿಸಲು ಸಾಧ್ಯವೇ ಇಲ್ಲವೇ? ಈ ವಾರದಲ್ಲಿ ನಿತ್ಯವೂ ಆತಂಕಕಾರಿ ಸಂಖ್ಯೆಯಲ್ಲಿ ಕೋವಿಡ್-19 ಸೋಂಕಿನ  ಪ್ರಕರಣಗಳು ದೃಢಪಡುತ್ತಿದ್ದು ಈ ವಾರಾಂತ್ಯದ ಭಾನುವಾರದಂದು  ರಾಜ್ಯದಲ್ಲಿ ಮತ್ತೆ 11 ಹೊಸ ಕೇಸ್’ಗಳು ಪತ್ತೆಯಾಗಿವೆ.

ಈ ಕುರಿತಂತೆ ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಭಾನುವಾರ ಒಂದೇ ದಿನ 11 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ ಎಂದು ಹೇಳಿದೆ. ಈ  ಮೂಲಕ ಕರ್ನಾಟಕದಲ್ಲಿ ಕೊರೋನಾ  ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆಯಾಗಿದೆ.

ಈ ಬಾರಿ ಬೆಳಗಾವಿಯಲ್ಲಿ 4 ಮಂದಿಯಲ್ಲಿ ಈ ಮಾರಕ ವೈರಾಣು ಸೋಂಕು ದೃಢಪಟ್ಟಿದೆ. ಬೆಂಗಳೂರು, ಮೈಸೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಹೊಸ ಪ್ರಕರಣ ವರದಿಯಾಗಿವೆ ಎಂದು ರಾಜ್ಯ ಸರಕಾರದ ಹೆಲ್ತ್ ಬುಲೆಟಿನ್ ಮಾಹಿತಿ ನೀಡಿದೆ.

  • ಬೆಳಗಾವಿಯಲ್ಲಿ 4 ಹೊಸ ಪ್ರಕರಣ
  • ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಹೊಸ ಪ್ರಕರಣ, 
  • ಕಲಬುರಗಿಯಲ್ಲಿ 2 ಹೊಸ ಪ್ರಕರಣ, 
  • ಮೈಸೂರು 1  ಹೊಸ ಪ್ರಕರಣ, 
  • ವಿಜಯಪುರದಲ್ಲಿ  1 ಹೊಸ ಪ್ರಕರಣ,

ಈ ಹೊಸ ಪ್ರಕರಣಗಳೊಂದಿಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾದರೆ, ಬೆಳಗಾವಿಯಲ್ಲಿ 14 ಕ್ಕೆ ಹೆಚ್ಚಳವಾಗಿದೆ. ಮೈಸೂರಿನಲ್ಲಿ ಈ ಸಂಖ್ಯೆ 49  ಕ್ಕೆ ತಲುಪಿದೆ.

Related posts