ಕರಾವಳಿ ಮಲೆನಾಡಲ್ಲಿ ಭಾರೀ ಮಳೆ; ಹಲವೆಡೆ ಪ್ರವಾಹ, ಭೂ ಕುಸಿತ

ಬೆಂಗಳೂರು: ಕರಾವಳಿ ಮಲೆನಾಡಿನಲ್ಲಿ ಭಾರೀ ಮಳೆಯಾಗಿದ್ದು ಜನ ಜೀವನ ಏರುಪೇರಾಗಿದೆ. ಹಲವು ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಅನೇಕ ಮನೆಗಳು ಸೇತುವೆಗಳು ಹಾನಿಗೊಳಗಾಗಿವೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿರಂತರ ವರ್ಷಧಾರೆಯಾಗಿದ್ದು, ನೇತ್ರಾವತಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಧರ್ಮಸ್ಥಳದಲ್ಲಿನ ಸ್ನಾನ ಘಟ್ಟ ಮುಳುಗಿದ್ದು ದೇವಾಲಯದ ಭಕ್ತಾದಿಕಗಳಿಗೆ ಸ್ನಾನಕ್ಕೆ ಅವಕಾಶ ಇಲ್ಲ.

ಚಾರ್ಮಾಡಿ ಘಾಟ್ ನ ರಸ್ತೆಗಳ ಮೇಲೆ ಬೃಹತ್ ಬಂಡೆಗಳು ಉರುಳಿಬಿದ್ದಿವೆ. ಹಲವು ಮರಗಳು ಧರೆಗುರುಳಿವೆ.

ಚಿಕ್ಕಮಗಳೂರಿನಲ್ಲಿ 14 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ, ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಈ ನಡುವೆ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿ ಬಗ್ಗೆ ಅಂದಾಜು ಮಾಡಲು ಸಚಿವ ಸಿ.ಟಿ.ರವಿ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

Related posts