ಹಸಿರು ಹೊದಿಕೆ: ಕೊತ್ತನೂರಿನಲ್ಲಿ 22.08ಎಕರೆ ಜಮೀನು ಮರುವಶಕ್ಕೆ ಸಚಿವರ ಆದೇಶ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೊತ್ತನೂರಿನಲ್ಲಿ ಅರಣ್ಯ ಇಲಾಖೆಗೆ ವಹಿಸಲಾದ 22.08ಎಕರೆ ಜಮೀನಿನ ಮರುವಶಕ್ಕೆ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರು ನಿರ್ದೇಶನ ನೀಡಿದ್ದಾರೆ. 22.08ಎಕರೆ ಜಮೀನಿನ ಮರುವಶಕ್ಕೆ ಪ್ರಕ್ರಿಯೆ ಆರಂಭಿಸಬೇಕು ಎಂದು ಸೂಚಿಸಿರುವ ಅವರು, ಕೆ.ಆರ್.ಪುರ-2 ಹೋಬಳಿಯ ಕೊತ್ತನೂರು ಗ್ರಾಮದ ಸರ್ವೆ ನಂ.48ರಲ್ಲಿ 8 ಗುಂಟೆ ಜಮೀನನ್ನು ಅರಣ್ಯ ಇಲಾಖೆಗೆ 2000 ಇಸವಿಯಲ್ಲಿ ವಹಿಸಲಾಗಿರುತ್ತದೆ. ಆದರೆ, ಅಧಿಕಾರಿಗಳು ಇಲಾಖೆಗೆ ಮಂಜೂರಾದ ಭೂಮಿಯನ್ನು ವಶಕ್ಕೆ ಪಡೆದು ಅರಣ್ಯ ಬೆಳೆಸುವಲ್ಲಿ ವಿಫಲರಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣ ‘X’ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಈಶ್ವರ್ ಬಿ. ಖಂಡ್ರೆ, ಬೆಂಗಳೂರಿನಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಉದ್ದೇಶದಿಂದ 1999-2000 ಸಾಲಿನಲ್ಲಿ ಕೆಆರ್ ಪುರಂ ಬಳಿಯ ಕೊತ್ತನೂರು ಸರ್ವೇ ನಂ. 48ರಲ್ಲಿನ 22.08 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆದರೆ, ಈ ಜಮೀನನ್ನು ವಶಕ್ಕೆ…