ಉಡುಪಿ: ಕಡಲತಡಿಯ ನಗರಿ, ದೇವರ ನಾಡು ಉಡುಪಿಯಲ್ಲಿ ‘ಸಂಗೀತ ಸುಗ್ಗಿ’ಯೊಂದು ನಾಡಿನ ಗಮನಸೆಳೆಯಿತು. ಗಾನ ಸರಸ್ವತಿಯರನ್ನು ಉತ್ತೇಜಿಸುವ, ಸಂಗೀತ ಸಾಮ್ರಾಟರನ್ನು ಗುರುತಿಸಿ ಸನ್ಮಾನಿಸುವ ಅನನ್ಯ ಸಂಗೀತ ವೈಭವ ಕಲಾಜಗತ್ತಿನ ಕುತೂಹಲದ ಕೇಂದ್ರಬಿಂದುವಾಯಿತು. ‘ನನ್ನ ನಾಡು ನನ್ನ ಹಾಡು’ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ನೆರವೇರಿತು. ಗಾನ ಕೋಗಿಲೆಗಳಿಗಾಗಿಯೇ ಸಂಗೀತ ಸ್ಪರ್ಧೆ ಆಯೋಜಿಸುವ ಮೂಲಕ ಸಂಗೀತಾಸಕ್ತರ ಮೆಚ್ಚುಗೆಗೂ ಈ ಕಾರ್ಯಕ್ರಮ ಪಾತ್ರವಾಯಿತು. . ಉಡುಪಿ ಜಿಲ್ಲೆಯ ಲಯನ್ಸ್ (317 ಸಿ) ಹಾಗೂ ರೋಟರಿ ಕ್ಲಬ್ (ಜಿಲ್ಲೆ 3182) ಒಳಗೊಂಡ ಲಯನ್ಸ್ ಕ್ಲಬ್ ಅಂಬಲಪಾಡಿ, ಕಲ್ಯಾಣಪುರ, ಸಂತೆಕಟ್ಟೆ, ಉಡುಪಿ ಚೇತನ ಹಾಗೂ ರೋಟರಿ ಸಂಸ್ಥೆ ಅಂಬಲಪಾಡಿ, ಕಲ್ಯಾಣಪುರ, ಉಡುಪಿ ಮಿಡ್ ಟೌನ್ ಹಾಗೂ ಬ್ರಹ್ಮಾವರ ಇವರ ಸಹಭಾಗಿತ್ವದಲ್ಲಿ ಮಣಿಪಾಲ ‘ಶ್ರೀ ದುರ್ಗಾ ಮ್ಯೂಸಿಕ್ ಮೀಟ್’ ಸಹಯೋಗದೊಂದಿಗೆ ಆಯೋಜಿತವಾದ ‘ನನ್ನ ನಾಡು ನನ್ನ ಹಾಡು’ ಜಿಲ್ಲಾಮಟ್ಟದ ಕನ್ನಡ ಹಾಡುಗಳ ಸ್ಪರ್ಧೆಯಯಲ್ಲೂ ಅನೇಕ…